ಫೇರ್ ನೆಸ್ ಕ್ರೀಂ ಜಾಹೀರಾತಿನಲ್ಲಿ ನಟಿಸಲು 'ನೋ' ಎಂದ ನಟ ಸುಶಾಂತ್ ಸಿಂಗ್

ಶನಿವಾರ, 13 ಜನವರಿ 2018 (07:02 IST)
ಮುಂಬೈ : ಎಂ.ಎಸ್. ಧೋನಿ ಚಿತ್ರದ ಮೂಲಕ ಅಸಂಖ್ಯಾತ ಅಭಿಮಾನಿಗಳ ಮನಗೆದ್ದ ಬಾಲಿವುಟ್ ನಟ ಸುಶಾಂತ್ ಸಿಂಗ್ ಫೇರ್ ನೆಸ್ ಕ್ರೀಂ ಜಾಹೀರಾತಿನಲ್ಲಿ ನಟಿಸಲು ನಿರಾಕರಿಸಿದ್ದಾರೆ.

 
ಫೇರ್ ನೆಸ್ ಕ್ರೀಂ ಜಾಹೀರಾತಿನಲ್ಲಿ ನಟಿಸಲು ಅನೇಕ ಬಾಲಿವುಡ್ ಹಲವು ತಾರೆಯರು ನಿರಾಕರಿಸಿದ್ದು, ಈಗ ಅವರ ಸಾಲಿಗೆ ಸುಶಾಂತ್ ಕೂಡ ಸೇರ್ಪಡೆಯಾಗಿದ್ದಾರೆ. ‘ಅನೇಕರು ನನ್ನನ್ನೇ ಫಾಲೋ ಮಾಡುತ್ತಾರೆ. ಅವರಿಗೆ ಮೋಸ ಮಾಡಲು ನನಗೆ ಇಷ್ಟವಿಲ್ಲ. ಭರವಸೆಯಿಲ್ಲದ ಕಂಪೆನಿಯ ಬಗ್ಗೆ ನಾನು ಪ್ರಚಾರ ಮಾಡಲ್ಲ’ ಎಂದು ಹೇಳಿದ್ದಾರೆ. ಹಾಗೆ ಕಂಪೆನಿ 15 ಕೋಟಿ ಸಂಭಾವನೆ ಕೊಡುವುದಾಗಿ ಹೇಳಿದ್ದರೂ ಅದನ್ನು ನಗುತ್ತಲೇ ನಿರಾಕರಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ