ಐಶ್ವರ್ಯಾ ರೈ ಬಚ್ಚನ್ ಅವರು ಸಿನಿಮಾವೊಂದರಲ್ಲಿ ನಟಿಸಲು ಕೇಳಿದ ಸಂಭಾವನೆ ಎಷ್ಟು ಗೊತ್ತಾ...?

ಶನಿವಾರ, 6 ಜನವರಿ 2018 (07:11 IST)
ಮುಂಬೈ: ತಾಯಿಯಾದ ಮೇಲೂ ಬಾಲಿವುಡ್ ನಟಿಯರು ತಮ್ಮ ಗ್ಲಾಮರ್ ಉಳಿಸಿಕೊಂಡಿದ್ದಾರೆ ಎಂಬುದಕ್ಕೆ  ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರೇ ಒಂದು ಉದಾಹರಣೆ. ಈಗ ಇವರು ಫನ್ನಿಖಾನ್ ಸಿನಿಮಾದಲ್ಲಿ ನಟಿಸುತ್ತಿದ್ದು, ಇದರ ಮಧ್ಯ ಹಲವು ನಿರ್ಮಾಪಕರು ಅವರನ್ನು ಭೇಟಿಯಾಗುತ್ತಿದ್ದಾರೆ.

ಐಶ್ವರ್ಯಾ ರೈ ಅವರು 1967 ರಲ್ಲಿ ರಿಲೀಸ್ ಆದ ರಾತ್ ಔರ್ ದಿನ್ ಚಿತ್ರದ ರಿಮೇಕ್ ನಲ್ಲಿ ನಟಿಸಲು ಒಪ್ಪಿಕೊಂಡಿದ್ದು, ಇದಕ್ಕಾಗಿ ಅವರ ಸಂಭಾವನೆ 10ಕೋಟಿ ಕೊಡಬೇಕೆಂದು ಡಿಮ್ಯಾಂಡ್ ಮಾಡಿದ್ದಾರಂತೆ. ಈ ಚಿತ್ರವನ್ನು ಪ್ರೇರಣಾ ಹಾಗು ಅರ್ಜುನ್ ಎನ್ ಕಪೂರ್ ಅವರು ನಿರ್ಮಿಸುತ್ತಿದ್ದು, ಐಶ್ವರ್ಯಾ ರೈ ಅವರಿಗೆ 10 ಕೋಟಿ ಸಂಭಾವನೆ ನೀಡಲು ಒಪ್ಪಿಕೊಂಡಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ