ಮತ್ತೊಬ್ಬ ಕ್ರೀಡಾಪಟುವಿನ ಜೀವನಕಥಾಧಾರಿತ ಸಿನಿಮಾದಲ್ಲಿ ಸುಶಾಂತ್ ಸಿಂಗ್ ರಜಪೂತ್

ಗುರುವಾರ, 3 ಮಾರ್ಚ್ 2016 (11:29 IST)
ಕೈ ಪೋಚೇ ಸಿನಿಮಾದ ಮೂಲಕ ಬಾಲಿವುಡ್ ಅಂಗಳದಲ್ಲಿ ಹೊಸ ಭರವಸೆಯನ್ನು ಹುಟ್ಟಿ ಹಾಕಿದ ನಟ ಸುಶಾಂತ್ ಸಿಂಗ್ ರಜಪೂತ್. ಇದೀಗ ಸುಶಾಂತ್ ಮಹೇಂದ್ರ ಸಿಂಗ್ ಧೋನಿ ಅವರ ಜೀವನ ಕಥೆಯಾಧಾರಿತ ಸಿನಿಮಾದಲ್ಲಿ ಅಭಿನಯಿಸುತ್ತಿರೋದು ನಿಮಗೆಲ್ಲಾ ಗೊತ್ತೇ ಇದೆ. ಇದೀಗ ಸುಶಾಂತ್ ಕೈ ಮತ್ತೊಂದು ಅಂತಹದ್ದೇ ಸಿನಿಮಾ ಬಂದಿದೆ.
 
ಧೋನಿ ದಿ ಅನ್ಟೋಲ್ಡ್ ಸ್ಟೋರಿ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಸುಶಾಂತ್ ಮತ್ತೊಬ್ಬ ಕ್ರೀಡಾಪಟು ಮುರಳಿಕಾಂತ್ ಪೇಟ್ಕರ್ ಅವರ ಜೀವನಕಥೆಯಾಧಾರಿತ ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರಂತೆ.1970 ರಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟ ಹಾಗೂ 1972 ರಲ್ಲಿ ನಡೆದ ಪ್ಯಾರಾ ಒಲಿಂಪಿಕ್ ನಲ್ಲಿ ಇವರು ಚಿನ್ನದ ಪದಕ ಗೆದ್ದಿದ್ದರು.ಸ್ವಿಮಿಂಗ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ಇವರ ಜೀವನ ಕಥೆ ಬಾಲಿವುಡ್ ನಲ್ಲಿ ಸಿನಿಮಾವಾಗ್ತಿದೆ.ಮುರಳಿ ಅನ್ಸಂಗ್ ಹೀರೋ ಎಂಬ ಹೆಸರಲ್ಲಿ ಸಿನಿಮಾವಾಗುತ್ತಿದೆ. 
 
ಈ ಸಿನಿಮಾದ ನಾಯಕನಾಗಿ ಸುಶಾಂತ್ ಸಿಂಗ್ ರಜಪೂತ್ ಅವರು ಆಯ್ಕೆಯಿದ್ದಾರೆ.ಪ್ರಶಾಂತ್ ಸಿಂಗ್ ಇವರು ಈ ಸಿನಿಮಾಗಾಗಿ ಈಗಾಗಲೇ ಸ್ಕ್ರಿಫ್ಟ್ ಕೂಡ ರೆಡಿ ಮಾಡಿಕೊಂಡಿದ್ದಾರಂತೆ.ಎಲ್ಲಾ ಅಂದುಕೊಂಡಂತೆ ಆದ್ರೆ ಮುಂದಿನ ವರ್ಷ ಈ ಸಿನಿಮಾ ಪ್ರೇಕ್ಷಕರೆದುರಿಗೆ ಬರಲಿದೆ.

ವೆಬ್ದುನಿಯಾವನ್ನು ಓದಿ