ಮೊಹೆಂಜದಾರೋ ಸಿನಿಮಾ ವೀಕ್ಷಿಸಿದ ಸುಸೈನ್ ಖಾನ್

ಗುರುವಾರ, 18 ಆಗಸ್ಟ್ 2016 (09:48 IST)
ಬಾಲಿವುಡ್ ನ ಕ್ಯೂಟ್ ಜೋಡಿ ಎಂದು ಕರೆಸಿಕೊಳ್ಳುತ್ತಿದ್ದ ಹೃತಿಕ್ ರೋಷನ್ ಹಾಗೂ ಸುಸೈನ್ ಖಾನ್ ಪರಸ್ಪರ ದೂರವಾಗಿ ಎರಡು ವರ್ಷಗಳೇ ಕಳೆದ್ರು ಇಂದಿಗೂ ಅವರಿಬ್ಬರ ನಡುವೆ ಸ್ನೇಹದ ಬೇಸುಗೆ ಮಾತ್ರ ಹಾಗೇ ಉಳಿದಿದೆ. ಮಕ್ಕಳಿಗಾಗಿ ಇಬ್ಬರೂ ಕೂಡ ಇಂದಿಗೂ ಉತ್ತಮ ಸ್ನೇಹಿತರಾಗಿಯೇ ಉಳಿದಿದ್ದಾರೆ. ಹೃತಿಕ್ ಹಾಗೂ ಸುಸೈನ್ ಇವತ್ತಿಗೂ ಒಬ್ಬರಿಗೊಬ್ಬರು ನೆರವಾಗುತ್ತಾರೆ. ಅದಕ್ಕೆ ಅನೇಕ ಉದಾಹರಣೆಗಳು ಕೂಡ ಇವೆ.

   ಇನ್ನು ಮೊನ್ನೆ ತಾನೇ ಹೃತಿಕ್ ರೋಷನ್ ಅಭಿನಯದ ಮೊಹೆಂಜದಾರೋ ಸಿನಿಮಾ ರಿಲೀಸ್ ಆಯ್ತು. ಇನ್ನು ಅಪ್ಪನ ಸಿನಿಮಾ ರಿಲೀಸ್ ಆಗಿದೆ ಅಂದ್ರೆ ಮಕ್ಕಳು ನೋಡದೇ ಇರ್ತಾರಾ ಹೇಳಿ. ಹೃತಿಕ್ ಮಕ್ಕಳು ಕೂಡ ಹಾಗೆಯೇ. ಅಪ್ಪನ ಸಿನಿಮಾವನ್ನು ನೋಡಿದ್ದಾರೆ. ಅಂದ್ಹಾಗೆ ಸಿನಿಮಾ ಸ್ಪೆಷಲ್ ಸ್ಕ್ರೀನಿಂಗ್ ನಲ್ಲಿ  ಸುಸೈನ್ ಖಾನ್ ಅವರಿಗೆ ಸಿನಿಮಾ ನೋಡೋದಕ್ಕೆ ಸಾಧ್ಯವಾಗಿರಲಿಲ್ಲ.

ಹಾಗಾಗಿ ಸುಸೈನ್ ಮಕ್ಕಳೊಂದಿಗೆ ಮುಂಬೈನಲ್ಲಿ ಸಿನಿಮಾವನ್ನು ವೀಕ್ಷಿಸಿದ್ರು.ಆದ್ರೆ ಈ ವೇಳೆ ಸುಸೈನ್ ಮಾಧ್ಯಮದವರಿಂದ ತುಂಬಾನೇ ದೂರ ಉಳಿದಿದ್ರಂತೆ.ಅಲ್ಲದೇ ನಾನು ಯಾವ ಸಿನಿಮಾ ನೋಡಿದೆ ಅನ್ನೋದನ್ನು ಕೂಡ ಅವರು ಹೇಳಿಕೊಂಡಿಲ್ಲವಂತೆ.

ಆದ್ರೆ ಈ ವಾರ ರಸ್ತುಮ್ ಹಾಗೂ ಮೊಹೆಂಜದಾರೋ ಈ ಎರಡು ಸಿನಿಮಾಗಳು ಮಾತ್ರ ರಿಲೀಸ್ ಆಗಿವೆ. ಹಾಗಾಗಿ ಸುಸೈನ್ ಮೊಹೆಂಜದಾರೋ ಸಿನಿಮಾನ್ನೇ ನೋಡಿರಬೇಕು ಅಂತಿದ್ದಾರೆ ಕೆಲವರು.ಅಲ್ಲದೇ ಸಿನಿಮಾ ವೀಕ್ಷಣೆ ವೇಳೆ ಹೃತಿಕ್ ಮಕ್ಕಳು ಜೊತೆಯಲ್ಲಿದ್ದರಿಂದ ಸುಸೈನ್ ಹೃತಿಕ್ ರೋಷನ್ ಅಭಿನಯದ ಮೊಹೆಂಜದಾರೋ ಸಿನಿಮಾವನ್ನೇ ವೀಕ್ಷಿಸಿರಬೇಕು ಎನ್ನಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ವೆಬ್ದುನಿಯಾವನ್ನು ಓದಿ