ಮುಂಬೈ: ನಟಿ ಕರೀನಾ ಕಪೂರ್ ಅವರು ನ್ಯೂಟ್ರಿಷಿಯನ್ ರುಜುತಾ ದಿವಾಕರ್ ಅವರು ತೈಮೂರ್ ಗೆ ನೀಡಿದ ಉಡುಗೊರೆ ಬಗ್ಗೆ ಇನ್ಸ್ಟ್ರಾಗ್ರಾಮ್ ನಲ್ಲಿ ತಮಗಾದ ಖುಷಿ ಹಂಚಿಕೊಡಿದ್ದಾರೆ.
ಪಟೌಡಿಯಲ್ಲಿ ಕರೀನಾ ಕಪೂರ್ ಹಾಗು ಸೈಫ್ ಅಲಿ ಖಾನ್ ಮಗ ತೈಮೂರ್ ನ ಮೊದನ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗಿದ್ದು, ರುಜುತಾ ಅವರು ತೈಮೂರ್ ಗೆ ಶುಭಕೋರಿ ಪೋಟೋವೊಂದನ್ನು ಇನ್ಸ್ಟ್ರಾಗ್ರಾಮ್ ನಲ್ಲಿ ಹಾಕಿದ್ದಾರೆ. ತೈಮೂರ್ ಗೆ ಹಕ್ಕಿ, ಪಕ್ಷಿ, ಜೇನುನೊಣ, ಚಿಟ್ಟೆಗಳು ಮುಂಬೈನಲ್ಲಿ ನೋಡಲು ಸಿಗದ ಕಾರಣ ಈ ಸಣ್ಣ ಫಾರೆಸ್ಟ ಒಂದನ್ನು ಉಡುಗೊರೆಯಾಗಿ ನೀಡಿರುವುದಾಗಿ ಹೇಳಿದ್ದಾರೆ.
ಪಟೌಡಿಯಲ್ಲಿ ಈಗ ಈ ಸಣ್ಣ ಫಾರೆಸ್ಟ ಶುರುಮಾಡಲಾಗಿದೆ. ಹಾಗೆ ಪೋಟೋದಲ್ಲಿರುವಂತೆ ಬಾಳೆಗಿಡಗಳನ್ನು ನೆಡಲಾಗಿದೆ. ತೈಮೂರ್ ಗಿಡದಂತೆ ಬೆಳೆದು ಸಮಾಜಕ್ಕೆ ಮಾದರಿಯಾಗುತ್ತಾನೆ ಎಂಬುದು ಅವರ ನಂಬಿಕೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ