ತಮನ್ನ ಮುತ್ತಿನ ರೋಚಕ ಕಥೆ.. ನಿಮಗಾಗಿ!

ಮಂಗಳವಾರ, 22 ಏಪ್ರಿಲ್ 2014 (09:47 IST)
ಟಾಲಿವುಡ್ , ಕಾಲಿವುಡ್ ನಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆದ ಮಿಲ್ಕಿ ಬ್ಯೂಟಿ ತಮನ್ನ ಈಗ ಬಾಲಿವುಡ್ ನಲ್ಲಿಯೂ ಸಹ ಅವಕಾಶಗಳನ್ನು ಪಡೆಯುತ್ತಿದ್ದಾಳೆ. ಈಕೆಗೆ ಈಗ ಬಾಲಿವುಡ್  ಚಿತ್ರ  ಒಂದಕ್ಕೆ ಆಕೆ ಸಹಿ ಹಾಕಿದ್ದಾಳೆ.  ಆದರೆ ಆ ಚಿತ್ರಕ್ಕೆ ಸಹಿ ಹಾಕಿದಾಗ ಇದ್ದಂತಹ ಖುಷಿ ಈಗ ಇಲ್ಲ. ಅದಕ್ಕೆ ಕಾರಣ ಅದರಲ್ಲಿ ಆದ ಮಾರ್ಪಾಟುಗಳು. ಸೈನ್ ಮಾಡುವಾಗ ಇದ್ದಂತ ಯಾವುದೇ ಸಂಗತಿಗಳು ಹಾಗೆ ಉಳಿಸಿಕೊಳ್ಳು ತ್ತಿಲ್ಲ.  ನಿರ್ಮಾಪಕ ಮತ್ತು ನಿರ್ದೇಶಕರು. 
 
ಪ್ರಸ್ತುತ ಈಕೆ ರಿತೇಶ್ ದೇಶ್ ಮುಖ್ ಮತ್ತು ಸೈಫ್ ಅಲಿಖಾನ್ ಅವರ ಜೊತೆ ಹಮ್ ಶಕಲ್ ಅನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾಳೆ  . ಇವೆಲ್ಲ ಆರಂಭದಲ್ಲಿ   ಹೇಳಿದಂತಹ ಸಂಗತಿಗಳು. ಆದರೆ ಈಗ ಆ ಚಿತ್ರಕಥೆಯಲ್ಲಿ ಬದಲಾವಣೆ ಆಗಿದೆ. ಅದರಲ್ಲಿ ತಮನ್ನ ಗೆ ಲಿಪ್ ಲಾಕ್ ಸೀನ್ ಮತ್ತು ಬಿಕಿನಿ ಸೂಟ್ ಹಾಕಿರುವಂತಹ ದೃಶ್ಯದಲ್ಲಿ ನಟಿಸುವಂತೆ  ಒತ್ತಾಯ ಮಾಡುತ್ತಿದ್ದಾರಂತೆ. ಇದು ಆಕೆಗೆ ಸಿಕ್ಕಾಪಟ್ಟೆ ಬೇಸರ ಉಂಟು ಮಾಡಿದೆಯಂತೆ. 
 
ಈ ಚಿತ್ರದಲ್ಲಿ ಲಿಪ್ ಲಾಕ್ ದೃಶ್ಯ ಇಲ್ಲದೆ ಹೋದರೆ  ಕಥೆಗೆ ಅರ್ಥ ಇರುವುದಿಲ್ಲ ಎನ್ನುವ ಮಾತನ್ನು ನಿರ್ಮಾಪಕ ಹೇಳುತ್ತಿದ್ದಾರಂತೆ. ಆರಂಭದಲ್ಲಿ ನೋ ಅಂದರು ಅದನ್ನು ಮಾಡಲು ಆಕೆ ಸಿದ್ಧ ಆಗಿದ್ದಾಳೆ ಎನ್ನುವ ಮಾತು ಈಗ ಬಾಲಿವುಡ್ ನಲ್ಲಿ ಕೇಳಿ ಬರುತ್ತಿದೆ. ತಮನ್ನ ಬ್ಯೂಟಿಯನ್ನು  ಬಿಕಿನಿಯಲ್ಲಿ ಕಾಣಲು ಟಾಲಿವುಡ್ ಮತ್ತು ಕಾಲಿವುಡ್ ಮಂದಿಯೂ ಕಾಯುತ್ತಿದ್ದಾರೆ! 

ವೆಬ್ದುನಿಯಾವನ್ನು ಓದಿ