ಕಮಲ್ ಹಾಸನ್ ಅನಾರೋಗ್ಯ ಕಂಡು ರಜನಿಕಾಂತ್ ಅಸಮಾಧಾನ

ಬುಧವಾರ, 3 ಆಗಸ್ಟ್ 2016 (13:57 IST)
ಕಮಲ್ ಹಾಸನ್ ಆರೋಗ್ಯ ಪರಿಸ್ಥಿತಿ ಕಂಡು ಸೂಪರ್ ಸ್ಟಾರ್ ರಜನಿಕಾಂತ್ ಎಮೋಷನಲ್ ಆಗಿದ್ದಾರೆ ಎಂದು ತಿಳಿದು ಬಂದಿದೆ.
ತಮಿಳು ಚಿತ್ರರಂಗದಲ್ಲಿ ರಜನಿಕಾಂತ್ ಹಾಗೂ ಕಮಲ್ ಹಾಸನ್ ಮಧ್ಯೆ ವೃತ್ತಿಯಲ್ಲಿ ಎಷ್ಟೇ ಪ್ರತಿ ಸ್ಪರ್ಧೆಗಳಿದ್ರು. ಇಬ್ಬರ ಫ್ರೆಂಡ್‌ಶಿಪ್‌ಗೆ ಯಾವುದು ಅಡ್ಡಿ ಬಂದಿರಲಿಲ್ಲ. ಕಮಲ್ ಹಾಸನ್‌ರನ್ನು ಸ್ನೇಹಿತರಂತೆ ಕಾಣುತ್ತಿದ್ದ ರಜನಿಕಾಂತ್, ಕಮಲ್ ಹಾಸನ್ ಆರೋಗ್ಯ ಪರಿಸ್ಥಿತಿ ಕಂಡು ತಲೈವಾ ಅಸಮಾಧಾನರಾಗಿದ್ದಾರಂತೆ.  


ಚೆನ್ನೈನಲ್ಲಿ ಕಮಲ್ ಹಾಸನ್ ಬಿದ್ದ ಪರಿಣಾಮ ಅವರ ಕಾಲಿಗೆ ಗಾಯವಾಗಿತ್ತು.. ಚಿಕಿತ್ಸೆಗಾಗಿ ಅವರು ಚೆನ್ನೈನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಎರಡನೇಯ ಬಾರಿಗೆ ಸರ್ಜರಿಗೆ ಒಳಗಾಗಿದ್ದರು. ಆದ ಕಾರಣ ಕಮಲ್ ಹಾಸನ್ ಅನಾರೋಗ್ಯ ಕಂಡು ರಜನಿಕಾಂತ್ ಎಮೋಷನಲ್ ಆಗಿದ್ದರು ಎಂದು ಹೇಳಲಾಗಿದೆ.
 
ಅಲ್ಲದೇ ನಟ ರಜನಿಕಾಂತ್  ಕಮಲ್ ಹಾಸನ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಅದಾಗಲೇ ಕಮಲ್ ಹಾಸನ್ ಅವರಿಗೆ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು. ಆದಕಾರಣ ಅವರನ್ನು  ಸಂಪರ್ಕಿಸಲು ರಜನಿಗೆ ಸಾಧ್ಯವಾಗಲಿಲ್ಲವಂತೆ.
 
ಇನ್ನೂ ಕೆಲ ಮೂಲಗಳ ಪ್ರಕಾರ 'ಕಬಾಲಿ' ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್ ಕಮಲ್ ಹಾಸನ್ ಗಾಗಿ ರಜನಿಕಾಂತ್ ಆಯೋಜನೆ ಮಾಡಿದ್ದರು. ಏತನ್ಮಧ್ಯೆ ಕಮಲ್ ಹಾಸನ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ವೆಬ್ದುನಿಯಾವನ್ನು ಓದಿ