ಹಾಸ್ಯ ನಟ ರಾಜ್ ಪಾಲ್ ಯಾದವ್ ಗೆ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಿದ ದೆಹಲಿ ಹೈಕೋರ್ಟ್
ಶನಿವಾರ, 1 ಡಿಸೆಂಬರ್ 2018 (10:15 IST)
ಮುಂಬೈ : ಬಾಲಿವುಡ್ ನ ಖ್ಯಾತ ಹಾಸ್ಯ ನಟ ರಾಜ್ ಪಾಲ್ ಯಾದವ್ ಅವರಿಗೆ ದೆಹಲಿ ಹೈಕೋರ್ಟ್ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.
2010 ರಲ್ಲಿ ಅಟಾ ಪಟಾ ಲಪಟಾ ಚಿತ್ರ ನಿರ್ಮಾಣ ಹಾಗೂ ನಿರ್ದೇಶನಕ್ಕಾಗಿ ರಾಜ್ ಪಾಲ್ ಯಾದವ್ ತಮ್ಮ ನೌರಂಗ ಗೋದಾವರಿ ಎಂಟರ್ ಟೈನ್ ಮೆಂಟ್ ಮೂಲಕ ದೆಹಲಿ ಮೂಲದ ಮುರುಳಿ ಪ್ರೋಜೆಕ್ಟ್ ಕಂಪನಿಯಿಂದ 5 ಕೋಟಿ ರೂ.ಹಣವನ್ನು ಸಾಲವಾಗಿ ಪಡೆದಿದ್ದರು.
ಆದರೆ 2012 ಅಗಸ್ಟ್ 8 ರಲ್ಲಿ ಬಡ್ಡಿ ಜೊತೆಗೆ ಅಸಲು ಹಣವನ್ನು ನೀಡುವುದಾಗಿ ಒಪ್ಪಂದವಾಗಿತ್ತು. ಆದರೆ, ಯಾದವ್ 5 ಕೋಟಿ ಹಣವನ್ನು ಹಿಂದಿರುಗಿಸಿದ ಕಾರಣ ಮುರುಳಿ ಪ್ರಾಜೆಕ್ಟ್ ಕಂಪನಿ, ರಾಜ್ ಪಾಲ್ ಯಾದವ್ ವಿರುದ್ಧ ಕೇಸ್ ದಾಖಲಿಸಿತ್ತು. ಇದೀಗ ಈ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ರಾಜ್ ಪಾಲ್ ಯಾದವ್ ಗೆ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ