ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ವಂಚನೆ ಪ್ರಕರಣ ದಾಖಲು

ಶನಿವಾರ, 1 ಡಿಸೆಂಬರ್ 2018 (07:24 IST)
ಮುಂಬೈ : ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ಹಣ ಪಡೆದು ವಂಚನೆ ಮಾಡಿದ ಆರೋಪವೊಂದು ಕೇಳಿಬಂದಿದೆ.


ನಟಿ ಸೋನಾಕ್ಷಿ ಇಂಡಿಯನ್​ ಫ್ಯಾಶನ್ ಆ್ಯಂಡ್​ ಬ್ಯೂಟಿ ಅವಾರ್ಡ್ ಕಂಪನಿ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಡಾನ್ಸ್ ಮಾಡಲು ಹಣ ಪಡೆದು, ಇವೆಂಟ್​ಗೆ ಹಾಜರಾಗದೇ ವಂಚನೆ ಮಾಡಿದ್ದಾರೆ ಎನ್ನಲಾಗಿದೆ.


ಸೆ.30 ರಂದು ದೆಹಲಿಯಲ್ಲಿ ನಡೆಯಬೇಕಿದ್ದ ಇಂಡಿಯನ್​ ಫ್ಯಾಶನ್ ಆ್ಯಂಡ್​ ಬ್ಯೂಟಿ ಎಂಬ ಪ್ರಶಸ್ತಿ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ನಟಿ ಸೋನಾಕ್ಷಿಗೆ ಕಂತುಗಳ ಮೂಲಕ 28.17 ಲಕ್ಷ ರೂ. ಸಂಭಾವನೆ ನೀಡಲಾಗಿತ್ತಂತೆ. ಕಾರ್ಯಕ್ರಮಕ್ಕೆ ಆಗಮಿಸುವುದಾಗಿ  ಭರವಸೆ ನೀಡಿದ್ದ ಸೋನಾಕ್ಷಿ ಕಾರ್ಯಕ್ರಮಕ್ಕೆ ಗೈರು ಆಗುವ ಮೂಲಕ ವಂಚನೆ ಮಾಡಿದ್ದಾರೆ ಎಂದು ಅವರ ವಿರುದ್ಧ ವಂಚನೆ ಆರೋಪದಡಿ ಮೊರಾದಾಬಾದ್​ ಪೊಲೀಸ್​ ಠಾಣೆಯಲ್ಲಿ ಕಂಪನಿ ಮಾಲೀಕರಾದ ಪ್ರಮೋದ್ ಶರ್ಮಾ ದೂರು ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ