ಹೌದು,,, ಸಲ್ಮಾನ್ ಖಾನ್ ಹಾಗೂ ಲುಲಿಯಾ ವೆಂಟರ್ ಪರಸ್ಪರ ಪ್ರೀತಿಸುತ್ತಿದ್ದಾರೆ ಅವರಿಬ್ಬರು ವಿವಾಹವಾಗುತ್ತಾರೆ ಅನ್ನೋ ಸುದ್ದಿ ಇವತ್ತು ನಿನ್ನೆಯದಲ್ಲ. ಈ ಹಿಂದೆ ಲುಲಿಯಾ ಅವರು ಈ ಬಗ್ಗೆ ನಿರಾಕರಿಸಿದ್ರು. ಆದ್ರೆ ಸಲ್ಲು ಮತ್ತು ಲುಲಿಯಾ ಪಾರ್ಟಿಗಳಲ್ಲಿ , ಸಿನಿಮಾ ಶೋಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಮೊನ್ನೆ ಸುಲ್ತಾನ್ ಸ್ಪೆ,ಷಲ್ ಸ್ಕ್ರೀನಿಂಗ್‌ನಲ್ಲೂ ಜೊತೆಯಲ್ಲಿದ್ದರು. ಇದೀಗ ಸಲ್ಲು ತನ್ನ ಹಾಗೂ ಲುಲಿಯಾ ಅವರ ಸಂಬಂಧವನ್ನು ಬಹಿರಂಗಪಡಿಸಲು ಮುಂದಾಗಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಅದಕ್ಕೆ ಲುಲಿಯಾ ಓಕೆ ಅನ್ನೋದೊಂದೇ ಬಾಕಿಯಂತೆ.
ಇನ್ನು ಲುಲಿಯಾ ಸಲ್ಮಾನ್ ಖಾನ್ ಅವರ ಸುಲ್ತಾನ್ ಸಿನಿಮಾವನ್ನು ನೋಡಿ ಫುಲ್ ಖುಷಿಯಾಗಿದ್ದಾರಂತೆ. ಹಾಗಾಗಿ ತನ್ನ ಕುಟುಂಬದ ಸದಸ್ಯರಿಗಾಗಿ ತನ್ನ ಮನೆಯಲ್ಲೇ ಸಿನಿಮಾದ ಸ್ಪೆಷಲ್ ಸ್ಕ್ರೀನಿಂಗ್ ಏರ್ಪಡಿಸಲು ಮಂದಾಗಿದ್ದಾರಂತೆ. ಇದೇ ತಿಂಗಳ ಅಂತ್ಯದೊಳಗೆ ಸ್ಪೆಷಲ್ ಸ್ಕ್ರೀನಿಂಗ್ ನಡೆಯಲಿದೆ. ಇನ್ನು ಸಲ್ಲು ಕೂಡ ಲುಲಿಯಾ ಮನೆಯವ ಫೀಡ್ ಬ್ಯಾಕ್ ಹೇಗಿರುತ್ತೆ ಅಂತಾ ಕಾಯುತ್ತಿದ್ದಾರಂತೆ.