ನಿಜ ಜೀವನದಲ್ಲೂ ಮಾನವೀಯತೆಗೆ ಸಾಕ್ಷಿಯಾದ ನಟ ನಟಿಯರು

ಗುರುವಾರ, 25 ಆಗಸ್ಟ್ 2016 (11:11 IST)
ಬಾಲಿವುಡ್ ನಟರು ತಮ್ಮ ಅಭಿನಯದಿಂದ ಜನರಿಗೆ ಎಷ್ಟು ಹತ್ತಿರವಾಗಿದ್ದಾರೋ, ಅಷ್ಟೇ ತೆರೆಯ ಹಿಂದೆ ಕೂಡ ಜನರಿಗೆ ತುಂಬಾ ಹತ್ತಿರವಾಗಿದ್ದಾರೆ. ಹಲವು ನಟರು ಮಾನವೀಯತೆ ಮೆರೆದಿದ್ದಾರೆ. ಸಹಾಯ ಮಾಡುವ ಮೂಲಕ ಹಲವು ಜನರ ಮನಸ್ಸನ್ನು ಗೆದ್ದಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಈ ದಿಗ್ಗಜರು, ಸಂಕಷ್ಟದಲ್ಲಿರು ಹಲವರಿಗೆ ಸಹಾಯ ಮಾಡಿದ್ದಾರೆ. ಇಂದಿಗೂ ಮಾಡುತ್ತಿದ್ದಾರೆ. ಈ ಕುರಿತು ಸ್ಪೆಷಲ್ ಸ್ಟೋರಿ

 
ಮಹಾರಾಷ್ಟ್ರದ ದಿಂದ ಹಿಡಿದು ಮರಠಾವಾಡದವರೆಗೂ ರೈತರ ಬಗ್ಗೆ ಹಲವು ವರದಿಗಳಾಗುತ್ತವೆ. ರೈತರ ಆತ್ಮಹತ್ಯಾ ಪ್ರಕರಣಗಳು ಇದುವರೆಗೂ ನಿಲ್ಲುತ್ತಿಲ್ಲ. ಇದಕ್ಕಾಗಿ ಬಾಲಿವುಡ್ ಸ್ಟಾರ್‌ಗಳು ಸಹಾಯ ಹಸ್ತ ಚಾಚಿದ್ದಾರೆ. ಬಾಲಿವುಡ್ ಖ್ಯಾತ ನಟ ನಾನಾ ಪಾಟೇಕರ್ ನಿಮಗೆ ಗೊತ್ತಿರಬಹುದು. ರೈತರಿಗಾಗಿ ನಾನಾ ಪಾಟೇಕರ್ ನೆರವಿಗೆ ಧಾವಿಸಿದ್ದಾರೆ.

ಮಹಾರಾಷ್ಟ್ರದ ಎಲ್ಲಾ ಕಡೆ ಸಂಚರಿಸಿ ರೈತರಿಗೆ ಸಹಾಯ ಮಾಡಿದ್ದಾರೆ. ರೈತ ಕುಟುಂಬದ ಸುಮಾರು  300 ವಿಧವೆಯರನ್ನು ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಇನ್ನೂ ನಾಮ್ ನಮಕ್ ಸ್ವಾಸ್ಥ ಕೇಂದ್ರವನ್ನು ಸ್ಥಾಪಿಸಿದ್ದಾರೆ. 

ಅಕ್ಷಯ್ ಕುಮಾರ್
ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕೂಡ ತಮ್ಮ ನಿಜ ಜೀವನದಲ್ಲಿ ನೆರೆವು ನೀಡುವಲ್ಲಿ ಹಿಂದಿಲ್ಲ. ರೈತರ ಸಮಸ್ಯೆ ಅರಿತ ಅವರು, ಸಹಾಯ ಮಾಡಲು ಧಾವಿಸಿದ್ರು, ಸುಮಾರು 180 ರೈತ ಕುಟುಂಬಗಳಿಗೆ ತಲಾ 50 ಸಾವಿರ ರೂಪಾಯಿ ನೀಡಿದ್ದಾರೆ.

ಸಲ್ಮಾನ್ 
ಸಲ್ಮಾನ್ ಕೂಡ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಸದಾ ಸಾಮಾಜಿಕ ಕಾರ್ಯಗಳಲ್ಲಿ ಮುಂದೆ ಇರುವ ಸಲ್ಲು, ಬಡ ಮಕ್ಕಳಿಗೆ ಸಹಾಯ ಮಾಡುತ್ತಾರೆ. ಬೀಯಿಂಗ್ ಹ್ಯೂಮೆನ್ ಎನ್ನುವ ತಮ್ಮದೇ ಆದ ಸಂಸ್ಥೆ ಮೂಲಕ ಸಲ್ಮಾನ್ ಬಡ ಮಕ್ಕಳಿಗೆ ಹಾಗೂ ಅನಾರೋಗ್ಯ  ಮಕ್ಕಳ ಚಿಕಿತ್ಸೆಗೆ, ಹಾಗೂ ಅವರ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡುತ್ತಿದ್ದಾರೆ.

ಅಮಿರ ಖಾನ್ 
ನಟ ಅಮಿರಾ ಖಾನ್ ಕೂಡ ಎನ್‌ಜಿಓ ನಡೆಸುತ್ತಿದ್ದಾರೆ. ಈ ಮೂಲಕ ಸಾಮಾಜಿಕವಾಗಿ ಬದಲಾವಣೆ ಮಾಡುವಲ್ಲಿ ಸದಾ ಮುಂದಾಗಿದ್ದಾರೆ. 

ಐಶ್ವರ್ಯ ರೈ
ಖ್ಯಾತ ನಟಿ ಐಶ್ವರ್ಯ ರೈ ಕೂಡ ಮಾನವೀಯತೆ ಮೆರೆಯುತ್ತಿದ್ದಾರೆ. ತಮ್ಮ ಹೆಸರಿನಲ್ಲೇ ಒಂದು ಎನ್‌ಜಿಓ ಸಂಸ್ಥೆ ನಡೆಸುತ್ತಿದ್ದಾರೆ. ಈ ಮೂಲಕ ಹಲವರಿಗೆ ಸಹಾಯ ಮಾಡುತ್ತಿದ್ದಾರೆ.

ಶಾರೂಖ್ ಖಾನ್ 
'ಮೇಕ್ ಎ ವಿಶ್' ಎನ್ನುವ ಸಂಸ್ಥೆ ಮೂಲಕ ಶಾರೂಖ್ ಖಾನ್ ಕೆಲಸ ಮಾಡುತ್ತಿದ್ದಾರೆ. ಹಲವು ಕಾಯಿಲೆಗಳಿಂದ ನರಳುತ್ತಿರುವ ಮಕ್ಕಳಿಗೆ  ಸಹಾಯ ಮಾಡುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ