ಆರೋಪ ಮಾಡಿರುವ ಹುಡುಗಿ ಐಶ್ವರ್ಯ ಚೌಬೆ ಅಂತ.. ಈಕೆ ವೃತ್ತಿಯಲ್ಲಿ ಮಾಡೆಲ್ ಆಗಿದ್ದವಳು. ಐಶ್ವರ್ಯ ಚೌಬೆ ಅವರನ್ನು ಧಮಕಿ ಹಾಕಿರುವ ಇಜಾಜ್ ಖಾನ್, ಈಕೆಯ ಬಗ್ಗೆ ಹಲವು ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ. ಅದರಲ್ಲಿ ಸಲ್ಮಾನ್ ಖಾನ್ ಹಾಗೂ ಐಶ್ವರ್ಯ ಚೌಬೆ ಮಧ್ಯದ ಬಗ್ಗೆ ಬಿಚ್ಚಿಟ್ಟಿದ್ದಾರೆ.
ಈ ಬಗ್ಗೆ ನಾನು ನಿರ್ದೋಷಿ ಎಂದಿರುವ ಇಜಾಜ್ ಖಾನ್, ಐಶ್ವರ್ಯರನ್ನು ನಾನು ಒಂದೇ ಸಲ ಭೇಟಿ ಮಾಡಿದ್ದೆ. ನನಗೆ ನಿಜಕ್ಕು ಇದರಿಂದ ದುಃಖವಾಗಿದೆ. ಇವಳ ಜತೆಗೆ ನಾನು ಏನೆನು ಮಾಡಿಲ್ಲ. ಅಪರಿಚಿತರ ಜತೆಗೆ ಉತ್ತಮ ಸಂಬಂಧ ಹೊಂದಿದ್ದೇ ತಪ್ಪಾಯ್ತು. ಇದೀಗ ನನಗೆ ಈ ಸಮಸ್ಯೆ ಎದುರಾಗಿದೆ ಎಂದು ಇಜಾಜ್ ಖಾನ್ ಹೇಳಿದ್ದಾರೆ.
ಇನ್ನೂ ಇಜಾಜ್ ಹೇಳೋ ಪ್ರಕಾರ, ಐಶ್ವರ್ಯ ಚೌಬೆ ಸಲ್ಮಾನ್ ಖಾನ್ ಕುರಿತಂತೆ ಯೂ ಟೂಬ್ಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಳು. ಸಲ್ಮಾನ್ ಅವರ ಜತೆಗೆ ಹೊಸ ಐಶ್ವರ್ಯ ಆಗಿ ಇರುವುದಾಗಿ ಹೇಳಿದ್ದಳು. ಅಲ್ಲದೇ ಮುಂಬರುವ ಚಿತ್ರದಲ್ಲಿ ಸಲ್ಮಾನ್ ಖಾನ್ ಜತೆಗೆ ನಟಿಸಲಿದ್ದೇನೆ ಎಂದು ಸಹ ಹೇಳಿದ್ದಳು. ಇಜಾಜ್ ಹೇಳುವಂತೆ ಐಶ್ವರ್ಯ ಚೌಬೆ ಸಲ್ಮಾನ್ ಖಾನ್ ತಂದೆ ಸಲೀಂ ಅವರನ್ನು ಭೇಟಿಯಾಗುತ್ತೇನೆ ಎಂದು ಸಹ ಹೇಳಿದ್ದಳಂತೆ. ಸಲ್ಮಾನ್ ಖಾನ್ ಹೆಸರನ್ನು ಆಕೆ ಬಳಕೆ ಮಾಡುತ್ತಿದ್ದಾರೆ ಎಂದು ಇಜಾಜ್ ಖಾನ್ ತಿಳಿಸಿದ್ದರು.