ಕುಂಭಮೇಳದ ವೈರಲ್ ಮಾಲೆ ಮಾರಾಟಗಾರ್ತಿ ಮೊನಾಲಿಸಾ ಭೋಂಸ್ಲೆ, ತನ್ನ ಅದ್ಭುತ ಮೇಕ್ ಓವರ್‌ನಿಂದ ಇಂಟರ್‌ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ.
ಪ್ರಯಾಗರಾಜ್ ಕುಂಭಮೇಳದ ಸಮಯದಲ್ಲಿ ಮಣಿಗಳು ಮತ್ತು ಹೂಮಾಲೆಗಳನ್ನು ಮಾರಾಟ ಮಾಡುತ್ತಿದ್ದ ಹುಡುಗಿ ತನ್ನ ಕಣ್ಣೋಟದ ಮೂಲಕ ರಾತ್ರೋ ರಾತ್ರಿ ವಿಶ್ವದ ಗಮನ ಸೆಳೆದರು. ಈ ಮೂಲಕ ಭಾರೀ ಸಿನಿಮಾ ಆಫರ್‌ಗಳು ಅರಸಿ ಬಂದವು. ಸದ್ಯ ಕೆಲ ಪ್ರಮೋಷನ್‌ಗಳಲ್ಲೂ ಕಾಣಿಸಿಕೊಂಡ ಮೊಸಲಿಸಾ ಇದೀಗ ಮತ್ತೇ ತಮ್ಮ ಹೊಸ ಲುಕ್‌ನಿಂದ ಗಮನ ಸೆಳೆದಿದ್ದಾರೆ.
ಈ ವಿಡಿಯೋದಲ್ಲಿ ತುಂಬಾನೇ ಬೋಲ್ಡ್ ಲುಕ್‌ನಲ್ಲಿ ಕ್ಯಾಮಾರಾಗೆ ಫೋಸ್ ನೀಡಿದ್ದಾರೆ. ವೆಸ್ಟರ್ನ್ ಉಡುಗೆಯಲ್ಲಿ ತುಂಬಾನೇ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ಮತ್ತಷ್ಟು ಅಭಿಮಾನಿಗಳನ್ನು ಹೆಚ್ಚಿಸಿದೆ.
ಅಮೆರಾ ಡೈಮಂಡ್ಸ್ ಪ್ರಮೋಷನ್ ಶೂಟಿಂಗ್‌ನಲ್ಲಿ ಬ್ಲಾಕ್ ಸೂಟ್‌ನಲ್ಲಿ ತುಂಬಾನೇ ಬ್ರೈಟ್ ಆಗಿ ಕಾಣಿಸಿದ್ದಾರೆ.