ಟ್ವೀಟರ್ ನಲ್ಲಿ ಅತಿ ಹೆಚ್ಚು ಬೆಂಬಲಿಗರನ್ನು ಪಡೆದ ಭಾರತದ ಮೂರು ಗಣ್ಯ ವ್ಯಕ್ತಿಗಳು ಯಾರು ಗೊತ್ತಾ…?

ಗುರುವಾರ, 4 ಜನವರಿ 2018 (06:49 IST)
ಮುಂಬೈ : ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಟ್ವೀಟರ್ ನಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರು 3.02 ಕೋಟಿ ಬೆಂಬಲಿಗರನ್ನು ಹೊಂದಿದ್ದು, ಇವರು ಅತಿ ಹೆಚ್ಚು ಬೆಂಬಲಿಗರನ್ನು ಹೊಂದಿದ ಭಾರತದ ಮೂರನೇ ವ್ಯಕ್ತಿ ಎನಿಸಿಕೊಂಡಿದ್ದಾರೆ.


ಇದರಿಂದ ಸಂತೋಷಗೊಂಡ ಶಾರುಖ್ ಖಾನ್ ಅವರು ತಮ್ಮ ಅಭಿಮಾನಿಗಳಿಗೆ ಧನ್ಯವಾದವನ್ನುಹೇಳಿದ್ದಾರೆ. ಇನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 3.9 ಕೋಟಿ ಬೆಂಬಲಿಗರನ್ನು ಹೊಂದಿದ್ದು, ಇವರು ಅತಿ ಹೆಚ್ಚು ಬೆಂಬಲಿಗರನ್ನು ಹೊಂದಿದ ಭಾರತದ ಪ್ರಥಮ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಹಾಗೆ ಬಾಲಿವುಡ್ ನ ನಟ ಅಮಿತಾಬ್ ಬಚ್ಚನ್ ಅವರು ಎರಡನೇ ಸ್ಥಾನದಲ್ಲಿದ್ದು, ಇವರ ಬೆಂಬಲಿಗರ ಸಂಖ್ಯೆ 3.5 ಕೋಟಿ ಇದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ