ನಟ ಟೈಗರ್ ಶ್ರಾಫ್ ಅವರು ಅತ್ತಿದ್ದು ಯಾಕೆ ಗೊತ್ತಾ?

ಮಂಗಳವಾರ, 23 ಆಗಸ್ಟ್ 2016 (09:13 IST)
ಟೈಗರ್ ಶ್ರಾಫ್ ಅಂದಾಕ್ಷಣ ನಮಗೆ ನೆನಪಾಗೋದು ಅವರ ಆಕ್ಷನ್ ಸಿನಿಮಾಗಳು. ಆಕ್ಷನ್ ಹೀರೋ ಅಂತಾನೇ ಫೇಮಸ್ ಆಗಿರುವ ಟೈಗರ್ ಶ್ರಾಫ್ ತೆರೆ ಮೇಲೆ ಅನೇಕ ರೀತಿಯ ಪಾತ್ರಗಳಲ್ಲಿ ಮಿಂಚಿ ಅಭಿಮಾನಿಗಳ ದಿಲ್ ಕದ್ದವರು. ಆದ್ರೆ ಇದೇ ಟೈಗರ್ ಶ್ರಾಫ್ ಅವರು ತಾವು ಅನುಭವಿಸಿದ ನೋವು ಬೇಸರದ ಸಂಗತಿಯನ್ನು ಇದೀಗ ಹೊರಹಾಕಿದ್ದಾರೆ.
ಹೀರೋಪಂಥಿ ಹಾಗೂ ಭಾಘೀ ಸಿನಿಮಾದ ಮೂಲಕ ಬಾಲಿವುಡ್ ನಲ್ಲಿ ಭರವಸೆ ಮೂಡಿಸಿದ ನಟ ಟೈಗರ್ ಶ್ರಾಫ್. ಅವರ ಮೊದಲ ಸಿನಿಮಾ ಹೀರೋಪಂಥಿ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಇನ್ನು ಟೈಗರ್ ಶ್ರಾಫ್ ಅಭಿನಯಿಸಿದ ಎ ಫ್ಲೈಯಿಂಗ್ ಜಟ್ ಸಿನಿಮಾ ಇದೇ ತಿಂಗಳ 25 ರಂದು ರಿಲೀಸ್ ಆಗುತ್ತಿದೆ.

ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ಬ್ಯುಸಿಯಾಗಿರುವ ಟೈಗರ್ ತಮಗಾದ ನೋವನ್ನು ಹಂಚಿಕೊಂಡಿದ್ದಾರೆ. ಮೊದಲಿಗೆ ಹೀರೋಪಂಥಿ ಸಿನಿಮಾದಲ್ಲಿ ಅಭಿನಯಿಸುವಾಗ ನಾನು ಸಾಕಷ್ಟು ಅವಮಾನ ಅನುಭವಿಸಿದ್ದೇನೆ ಅಂತಾ ಅವರು ಹೇಳಿದ್ದಾರೆ. ಹೀರೋಪಂಥಿ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮದ ವೇಳೆ ನಾನು ಸಾಕಷ್ಟು ಅವಮಾನ ಅನುಭವಿಸಿದೆ. ಅದೆಷ್ಟೋ ಜನ ನನ್ನ ಹೆಸರು ಹಾಗೂ ಮುಖವನ್ನು ನೋಡಿ ಗೇಲಿ ಮಾಡಿದ್ದರು.

ಅಲ್ಲದೇ ನನ್ನ ಡ್ಯಾನ್ಸ್ ನೋಡಿ ಅನೇಕರು ನಕ್ಕರು.ಅದರಲ್ಲೂ ನನ್ನಹೇರ್ ಸ್ಟೈಲ್ ಹಾಗೂ  ಹೆಸರನ್ನು ನೋಡಿ ಅದೆಷ್ಟೋ ಮಂದಿ ಆಡಿಕೊಂಡ್ರು.ನಾನು ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವಾಗ ಬೇರೆ ರೀತಿಯಲ್ಲೇ ಅಂದುಕೊಂಡಿದ್ದೆ. ನನ್ನ ತಂದೆಗೆ ಸಿಕ್ಕಿದ ಹಾಗೇ ನನಗೂ ಗೌರವ ಸಿಗುತ್ತೆ ಅಂತಾ ಅಂದುಕೊಂಡಿದ್ದೆ.ಆದ್ರೆ ಎಂಟ್ರಿ ಕೊಟ್ಟ ಮೇಲೆ ಆಗಿದ್ದೇ ಬೇರೆ ಅಂತಾ ಟೈಗರ್ ಶ್ರಾಫ್ ಅವರು ಹೇಳಿಕೊಂಡಿದ್ದಾರೆ.ಆದ್ರೆ ಈಗ ನನಗೆ ಅಭಿಮಾನಿಗಳು ಕೊಡುತ್ತಿರುವ ಪ್ರೀತಿ ನೋಡಿದ್ರೆ ನನಗೆ ತುಂಬಾ ಖುಷಿಯಾಗುತ್ತೆ ಅಂತಾ ಟೈಗರ್ ಶ್ರಾಫ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ