ನಾನು ಕಳ್ಳನಲ್ಲ,ಮೋಸ ಮಾಡುತ್ತಿಲ್ಲ, ಆರೋಪಕ್ಕೆ ಪ್ರತಿಕ್ರಿಯೆ ನೀಡಿ ಟೈಗರ್ ಶ್ರಾಫ್

ಮಂಗಳವಾರ, 19 ಜುಲೈ 2016 (15:23 IST)
ನಟ ಟೈಗರ್ ಶ್ರಾಫ್ ಅಭಿನಯದ 'ಎ ಫ್ಲೈಯಿಂಗ್ ಜಾಟ್' ಚಿತ್ರದಲ್ಲಿ ಅಭಿನಯಿಸುತ್ತಿರುವುದು ಎಲ್ಲರಿಗೂ ಗೊತ್ತು. ಮುಂಬೈ ಮೂಲದ ಸ್ರ್ಕಿಪ್ಟ್ ರೈಟರ್ ಕಿರ್ತಿಕ್ ಕುಮಾರ್ ಪಾಂಡೆ ಎಂಬುವವರು ಟೈಗರ್ ಶ್ರಾಫ್ ಮೇಲೆ ಕಥೆ ಕದ್ದ ಆರೋಪ ಮಾಡಿದ್ದರು. ಈ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಟೈಗರ್ ಶ್ರಾಫ್ ನಾನು ಕಳ್ಳನಲ್ಲ ಎಂದು ತಿಳಿಸಿದ್ದಾರೆ.


ನಾನು ಯಾವುದೇ ಕಥೆಯನ್ನು ಕದ್ದಿಲ್ಲ ,ನಾನು ಮೋಸಗಾರನಲ್ಲ ಎಂದು ಟೈಗರ್ ಸ್ಪಷ್ಟನೆ ನೀಡಿದ್ದಾರೆ. 
 
ಕೆಲ ವರ್ಷಗಳ ಹಿಂದೆ ಟೈಗರ್ ಶ್ರಾಫ್‌ಗೆ 'ಮುನ್ನಾ ಮೈಕಲ್' ಸ್ಕ್ರೀಪ್ಟ್ ಬಗ್ಗೆ ಹೇಳಲಾಗಿತ್ತು. ಕಥೆ ಕೇಳಿದ್ದ ಶ್ರಾಫ್ ನನ್ನ ಚಿತ್ರದಲ್ಲಿ ನಟಿಸುವ ಬಗ್ಗೆ ಆಶ್ವಾಸನೆ ನೀಡಿದ್ದರು.

ಆದ್ರೆ 'ಮುನ್ನಾ ಮೈಕಲ್' ಚಿತ್ರಕ್ಕಾಗಿ ಸ್ರ್ಕೀಪ್ಟ್ ಬಗ್ಗೆ ಚರ್ಚೆ ಮಾಡಲಾಗಿತ್ತು. ಆದ್ರೆ ಟೈಗರ್ ಶ್ರಾಫ್ ಪ್ರೊಜೆಕ್ಟ್‌ನ್ನು ಮುಂದುಡುತ್ತಾ ಬಂದಿದ್ದರಂತೆ. ಆದ ಕಾರಣ ನಿರ್ಮಾಪಕಪರು ಟೈಗರ್ ವಿರುದ್ಧ ಆರೋಪ ಮಾಡಿದ್ದರು.

'ಎ ಫ್ಲೈಯಿಂಗ್ ಜಾಟ್' ಚಿತ್ರವನ್ನು ರೇಮಿಯೋ ಡಿಸೋಜಾ ನಿರ್ದೇಶನ ಮಾಡಿದ್ದು, ಬಾಲಾಜಿ ಮೋಷನ್ ಪಿಕ್ಚರ್ಸ್ ನಿರ್ಮಾಣದಲ್ಲಿ ಚಿತ್ರ ಮೂಡಿ ಬರುತ್ತಿದೆ.. ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ವೃತ್ತಿಪರ ಕುಸ್ತಿಪಟು ನಥನ್ ಜಾನ್ಸ್ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
 
ಇನ್ನೂ ಮತ್ತೊಂದು ಚಿತ್ರ ಬೇಫಿಕರ್ ಚಿತ್ರದಲ್ಲಿ ಟೈಗರ್ ಕಾಣಿಸಿಕೊಂಡಿದ್ದಾರೆ. ರೋಮ್ಯಾಂಟಿಕ್ ವಿಡಿಯೋ ಹಾಡು ಬೇಫಿಕರ್ ಚಿತ್ರದ ಎಲ್ಲೆಡೆ ಸದ್ದು ಮಾಡುತ್ತಿದೆ. ಚಿತ್ರದ ಹಾಡುಗಳು ಪಡ್ಡೆ ಹುಡುಗರ ನಿದ್ದೆಗೆಡಿಸಿವೆ.. ಇನ್ನೂ ಯೂಟೂಬ್‌ಲ್ಲಿ ರೋಮ್ಯಾಂಟಿಕ್ ಸಾಂಗ್ ವಿಡಿಯೋವನ್ನು 5 ಮಿಲಿಯನ್ ಜನರು ವೀಕ್ಷಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ