ಬೆಂಗಳೂರು: ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಗಾಯಕ ಸೋನು ನಿಗಂಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಿಗ್ ಶಾಕ್ ನೀಡಿದೆ.
ಬೆಂಗಳೂರಿನ ಕಾರ್ಯಕ್ರಮದಲ್ಲಿ ಸೋನು ನಿಗಂ ಕನ್ನಡ ಹಾಡು ಹಾಡಲು ಬೇಡಿಕೆಯಿಟ್ಟ ಯುವಕರಿಗೆ ಹೀಗೆ ಕನ್ನಡ ಕನ್ನಡ ಎಂದು ಹೇಳಿದ್ದರಿಂದಲೇ ಪಹಲ್ಗಾಮ್ ನಲ್ಲಿ ದಾಳಿಯಾಯಿತು ಎಂದಿದ್ದರು. ಅವರ ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ವಿವಾದದ ಬಳಿಕ ಸೋನು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರು. ತಾನು ಆ ಮಾತನ್ನು ಹೇಳಲು ವೇದಿಕೆ ಮುಂಭಾಗದಲ್ಲಿ ನಿಂತು ನನಗೆ ತೊಂದರೆ ಕೊಡುತ್ತಿದ್ದ ಯುವಕರನ್ನು ಉದ್ದೇಶಿಸಿ ಆ ಮಾತು ಹೇಳಬೇಕಾಯಿತು. ಕನ್ನಡ ಮತ್ತು ಕನ್ನಡಿಗರ ಮೇಲೆ ನನಗೆ ಅತ್ಯಂತ ಪ್ರೀತಿ, ಗೌರವವಿದೆ ಎಂದಿದ್ದರು.
ಆದರೆ ಸೋನು ತಮ್ಮ ಹೇಳಿಕೆಗೆ ಕ್ಷಮೆ ಕೇಳಿಲ್ಲ ಎಂಬ ಕಾರಣಕ್ಕೆ ವಾಣಿಜ್ಯ ಮಂಡಳಿ ಈಗ ಸೋನು ನಿಗಂಗೆ ಅಸಹಕಾರ ನೀಡಲು ತೀರ್ಮಾನಿಸಿದೆ. ಇನ್ನು ಮುಂದೆ ಕನ್ನಡದಲ್ಲಿ ಸೋನು ಹಾಡಲು ಅವಕಾಶ ಕೊಡದೇ, ಅವರ ಮ್ಯೂಸಿಕಲ್ ನೈಟ್ಸ್ ಗೆ ಸಹಕಾರ ಕೊಡದೇ ಇರಲು ವಾಣಿಜ್ಯ ಮಂಡಳಿ ತೀರ್ಮಾನಿಸಿದೆ.