ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ಟೈಗರ್ ಜಿಂದಾ ಹೈ

ಗುರುಮೂರ್ತಿ

ಶುಕ್ರವಾರ, 29 ಡಿಸೆಂಬರ್ 2017 (20:43 IST)
ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ಬಿಗ್ ಬಜೆಟ್ ಚಿತ್ರ ಟೈಗರ್ ಜಿಂದಾ ಹೈ ಇತ್ತೀಚಿಗಷ್ಟೇ ಬಿಡುಗಡೆಯಾಗಿತ್ತು. ಆದ್ರೆ ಇದೀಗ ಈ ಚಿತ್ರದ ಕಲೆಕ್ಷನ್ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವುದು ಸದ್ಯದ ಸುದ್ದಿಯಾಗಿದೆ.
ವಾಣಿಜ್ಯ ಪೋರ್ಟಲ್‌ನಲ್ಲಿನ ಒಂದು ವರದಿಯ ಪ್ರಕಾರ, ಚಿತ್ರವು ಬಿಡುಗಡೆಯಾದ 5 ದಿನಗಳಲ್ಲಿ ಸುಮಾರು 172.75 ಕೋಟಿಯನ್ನು ಈ ಚಿತ್ರ ಗಳಿಸಿದ್ದು ಮೊದಲ ವಾರದಲ್ಲೇ 200 ಕೋಟಿಯನ್ನು ಗಳಿಸುವ ಮೂಲಕ ದಾಖಲೆ ಬರೆದಿದೆ. 
 
ಅಲ್ಲದೇ ಈ ಚಿತ್ರವು ಈ ವರ್ಷ ಮುಗಿಯುವುದರೊಳಗೆ ಇನ್ನೂ ಹೆಚ್ಚು ಗಳಿಸಬಹುದೆಂದು ಅಂದಾಜಿಸಲಾಗಿದೆ. ಒಟ್ಟಿನಲ್ಲಿ ಈ ಚಿತ್ರಕ್ಕೆ ಅಭಿಮಾನಿಗಳು ಫಿದಾ ಆಗಿದ್ದು ಸಲ್ಮಾನ್ ಮತ್ತು ಕತ್ರಿನಾ ಜೋಡಿ ತೆರೆ ಮೇಲೆ ಮೋಡಿ ಮಾಡಿದೆ ಎಂದೇ ಹೇಳಬಹುದು. 
ಅಲಿ ಅಬ್ಬಾಸ್ ಈ ಚಿತ್ರವನ್ನು ನಿರ್ದೇಶಿಸಿದ್ದು ಜೂಲಿಯಸ್ ಪ್ಯಾಕ್ಯಾಮ್, ವಿಶಾಲ್-ಶೇಖರ್ ಅವರ ಸಂಗೀತ ಜನರನ್ನು ಮೋಹಗೊಳಿಸಿದೆ. ಬಹಳ ದಿನಗಳಿಂದ ದೂರವಾಗಿದ್ದ ಸಲ್ಮಾನ್ ಮತ್ತು ಕತ್ರಿನಾ ಜೋಡಿಯನ್ನು ನೋಡಲು ಪ್ರೇಕ್ಷಕರಿಗೆ ಹುಚ್ಚು ಹಿಡಿಸಿರುವುದಂತು ಸುಳ್ಳಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ