ಉಡ್ತಾ ಪಂಜಾಬ್ ಸಿನಿಮಾದಲ್ಲಿನ ಆಲಿಯಾ ಭಟ್ ಅವರ ಲುಕ್ ಮೊದಲ ಬಾರಿಗೆ ರಿಲೀಸ್ ಆದಾಗಲೇ ಅಭಿಮಾನಿಗಳು ಈ ಸಿನಿಮಾದಲ್ಲಿ ಆಲಿಯಾ ಅವರು ಭರ್ಜರಿ ಪರ್ಫಾಮೆನ್ಸ್ ನೀಡುತ್ತಾರೆ ಅಂತಾ ಅಂದುಕೊಂಡಿದ್ದರು.ಆಲಿಯಾ ಅವರು ಫಸ್ಟ್ ಲುಕ್ ನಲ್ಲಿ ಪಕ್ಕಾ ಬಿಹಾರಿ ಹುಡುಗಿಯಂತೆ ಕಾಣಿಸಿಕೊಂಡಿದ್ದರು. ಇದೀಗ ಸಿನಿಮಾ ರಿಲೀಸ್ ಆಗಿದ್ದು ಅಭಿಮಾನಿಗಳು ಆಲಿಯಾ ಅಭಿನಯವನ್ನು ಹಾಡಿ ಹೊಗಳುತ್ತಿದ್ದಾರೆ.
ಆಲಿಯಾ ಭಟ್ ಅವರು ತಾವು ಇದುವೆರೆಗೂ ಅಭಿನಯಿಸಿದ ಎಲ್ಲಾ ಸಿನಿಮಾಗಳಲ್ಲೂ ಅಭಿಮಾನಿಗಳಿಗೆ ನೆನಪಿನಲ್ಲಿ ಉಳಿಯುವಂತಹ ಪರ್ಫಾಮೆನ್ಸ್ ನೀಡಿದ್ದಾರೆ. ಈ ಹಿಂದೆ ರಿಲೀಸ್ ಆಗಿರುವ ಸ್ಟೂಡೆಂಟ್ ಆಫ್ ದಿ ಇಯರ್, ಕಪೂರ್ ಆಂಡ್ ಸನ್ಸ್ ಈ ಎಲ್ಲಾ ಸಿನಿಮಾಗಳಲ್ಲೂ ಅವರ ಅಭಿನಯ ಮೆಚ್ಚುವಂತಹದ್ದು.