ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಮುಫ್ತಿ ಸಿನಿಮಾದಲ್ಲಿ ವಸಿಷ್ಟ ಅವರು ಅಭಿನಯಿಸುತ್ತಿದ್ದಾರಂತೆ.ಅಂದ್ಹಾಗೆ ಗೋಧಿ ಬಣ್ಣ ಸಾಧಾರಣ ಮೈಕಟ್ಟಿನಲ್ಲಿನ ವಸಿಷ್ಟ ಅವರ ಅಭಿನಯ ನೋಡಿಯೇ ಮುಫ್ತಿ ಸಿನಿಮಾದಲ್ಲಿ ಅಭಿನಯಿಸೋದಕ್ಕೆ ಅವರಿಗೆ ಅವಕಾಶ ಸಿಕ್ಕಿದ್ದಂತೆ. ಇನ್ನು ಈ ಸಿನಿಮಾದಲ್ಲಿ ವಸಿಷ್ಟ ಅವರದ್ದು ತುಂಬಾನೇ ವಿಭಿನ್ನವಾದ ಪಾತ್ರವಂತೆ. ಈ ಹಿಂದೆ ಮಾಡಿದ ಪಾತ್ರಕ್ಕಿಂತ ತುಂಬಾನೇ ಭಿನ್ನವಾಗಿದೆ ಅಂತಾ ಅವರು ಹೇಳಿದ್ದಾರೆ. ಅಲ್ಲದೇ ಶಿವರಾಜ್ ಕುಮಾರ್ ಅವರ ಜೊತೆ ಅಭಿನಯಿಸೋದಕ್ಕೆ ಅವಕಾಶ ಸಿಕ್ಕಿರೋದಕ್ಕೆ ಅವರು ತುಂಬಾನೇ ಎಕ್ಸೈಟ್ ಆಗಿದ್ದಾರಂತೆ.