ಉದ್ಯಮಿಯ ಕಿರುಕುಳ ತಾಳಲಾರದೆ ಪೊಲೀಸರಿಗೆ ದೂರು ಕೊಟ್ಟ ಹಿರಿಯ ನಟಿ!
ಮಂಗಳವಾರ, 30 ಜನವರಿ 2018 (08:43 IST)
ಮುಂಬೈ: 70-80 ರ ದಶಕದಲ್ಲಿ ಬಾಲಿವುಡ್ ನಲ್ಲಿ ಮಿಂಚಿದ್ದ ಹಿರಿಯ ನಟಿ ಝೀನತ್ ಅಮಾನ್ ನಿಮಗೆ ನೆನಪಿರಬಹುದು. ಅವರೀಗ ಉದ್ಯಮಿಯೊಬ್ಬರ ವಿರುದ್ಧ ದೂರು ನೀಡಿದ್ದಾರೆ.
ಉದ್ಯಮಿ ಅಮರ್ ಖನ್ನಾ ತಮಗೆ ಕಿರುಕುಳ ನೀಡುತ್ತಿರುವುದಾಗಿ ಹಿರಿಯ ನಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಕೆಲವು ದಿನಗಳ ಕಾಲ ಈ ಉದ್ಯಮಿ ಜತೆ ನಟಿ ಸಂಪರ್ಕ ಹೊಂದಿದ್ದರು. ಆದರೆ ಮನಸ್ತಾಪ ಬಂದ ಹಿನ್ನಲೆಯಲ್ಲಿ ಆತನಿಂದ ದೂರವಾಗಿದ್ದರು.
ಹಾಗಿದ್ದರೂ ಅಮರ್ ತನಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಎಂದು ಅಮಾನ್ ದೂರಿನಲ್ಲಿ ಹೇಳಿದ್ದಾರೆ. ಝೀನತ್ ನಟ ಮಝರ್ ಖಾನ್ ಜತೆ ವಿವಾಹವಾಗಿದ್ದರು. ಆದರೆ ಪತಿ ಅನಾರೋಗ್ಯದಿಂದಾಗಿ 1998 ರಲ್ಲೇ ಮೃತಪಟ್ಟಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ