ವಿದ್ಯಾಬಾಲನ್ ಫೇಸುಬುಕ್ ಖಾತೆ ಶುರು

ಬುಧವಾರ, 26 ಅಕ್ಟೋಬರ್ 2016 (09:09 IST)
ಮುಂಬೈ: ಬಾಲಿವುಡ್ ಬೆಡಗಿ ವಿದ್ಯಾ ಬಾಲನ್ ಅಧಿಕೃತವಾಗಿ ಕೊನೆಗೂ ಸಾಮಾಜಿಕ ಜಾಲತಾಣ  ಫೇಸ್ ಬುಕ್ ಖಾತೆ ತೆರದಿದ್ದಾರೆ.

ವಿದ್ಯಾ ಈಗಾಗಲೇ ಟ್ವಿಟರ್ ಮತ್ತು ಇನ್ ಸ್ಟಾಗ್ರಾಂ ಪೇಜ್ ತೆರೆದಿದ್ದರೂ ಅಷ್ಟಾಗಿ ಬಳಸುತ್ತಿರಲಿಲ್ಲ. ಈಗ ತಮ್ಮಅಭಿನಯದ “ಕಹಾನಿ 2-ದುರ್ಗಾ ರಾಣಿ ಸಿಂಗ್” ಚಿತ್ರ ಬಿಡುಗಡೆ ಮೊದಲು ಫೇಸ್ ಬುಕ್ ಖಾತೆ ತೆರೆದಿದ್ದಾರೆ.

ಕಹಾನಿ 2 ಚಿತ್ರ 2012 ರಲ್ಲಿ ಬಿಡುಗಡೆಯಾದ ಕಹಾನಿ ಚಿತ್ರದ ಎರಡನೇ ಭಾಗವಾಗಿದೆ. ಫೇಸ್ ಬುಕ್  ಖಾತೆ ತೆರೆದಿರುವ ಬಗ್ಗೆ ಮಾತನಾಡಿರುವ ವಿದ್ಯಾ “ಫೇಸ್ ಬುಕ್ ಖಾತೆ ತೆರೆದಿರುವುದಕ್ಕೆ ಖುಷಿಯಾಗುತ್ತಿದೆ. ಜನ ನನ್ನಲ್ಲಿ ಪ್ರಶ್ನೆ ಕೇಳುತ್ತಿದ್ದಾರೆ. ಅವರ ಪ್ರಶ್ನೆಗಳಿಗೆ ಇಲ್ಲಿ ಉತ್ತರಿಸುವುದಕ್ಕೆ ಸಿದ್ಧನಿದ್ದೇನೆ” ಎಂದು ಅವರು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ