ಲೋಕಲ್ ಟ್ರೇನ್‌ನಲ್ಲಿ ಪ್ರಯಾಣ ಬೆಳೆಸಿದ ವಿದ್ಯಾ ಬಾಲನ್

ಮಂಗಳವಾರ, 3 ಮೇ 2016 (16:20 IST)
ಕೋಲ್ಕತ್ತಾದ ಲೋಕಲ್ ಟ್ರೇನ್‌ನಲ್ಲಿ ವಿದ್ಯಾ ಬಾಲನ್ ಪ್ರಯಾಣ ಮಾಡುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.. ಕಹಾನಿ-2 ಚಿತ್ರ ಶೂಟಿಂಗ್‌ಗಾಗಿ ಕೋಲ್ಕತ್ತಾಗೆ ಆಗಮಿಸಿದ್ದ ಡರ್ಟಿ ಕ್ಯಾತಿಯ ವಿದ್ಯಾ,ಚಾಂದ ನಗರದಲ್ಲಿರುವ ಹರ್ವಾ ಸ್ಟೇಷನ್ ನಲ್ಲಿ ಶೂಟ್ ಮಾಡಲಾಯಿತು.

ಆದ್ದರಿಂದ ಟ್ರಾಫಿಕ್ ಹಾಗೂ  ಸಮಯವನ್ನು ಸೇವ್ ಮಾಡಲು ವಿದ್ಯಾ ಬಾಲನ್ ಲೋಕಲ್ ಟ್ರೇನ್ ಮೂಲಕ ಸಂಚಾರ ಬೆಳೆಸಿದ್ರು.. 1 ಗಂಟೆಯಲ್ಲೇ ವಿದ್ಯಾ ಸಂಚಾರ ನಡೆಸಿದ್ದರು.. ಇದೇ ವೇಳೆ ಟೀಮ್ ಜತೆಗೆ ಆಗಮಿಸಿದ ವಿದ್ಯಾ ಅಭಿಮಾನಿಗಳಿಗೆ ಸರ್‌ಪ್ರೈಜ್ ನೀಡಿದ್ದರು.. 
 
ಕಹಾನಿ-2 ಚಿತ್ರ ಇದೊಂದು ಥ್ರಿಲ್ಲರ್ ಮೂವೀ ಅಂತ ಹೇಳಲಾಗ್ತಿದೆ. ಈ ಚಿತ್ರದಲ್ಲಿ ಗರ್ಭಿಣಿ ಮಹಿಳೆಯ ಕಥೆ ಒಳಗೊಂಡಿರಲಿದೆ. ಮಹಿಳೆ ತನ್ನ ಪತಿ ಕಾಣೆಯಾಗಿರುವ ಕುರಿತು ಪತ್ತೆ ಮಾಡುವುದೇ ಸ್ಟೋರಿಯ ಹಿಂದಿರುವ ಕಥೆ. ಒಬ್ಬ ಗರ್ಭಿಣಿ ಮಹಿಳೆಯ ಕ್ಲಿಷ್ಟ ಪರಿಸ್ಥಿತಿ ಕುರಿತು ಚಿತ್ರದಲ್ಲಿ ಬಿಂಬಿಸಲಾಗಿದೆ.  
 
ಚಿತ್ರದ ಕಥೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಹೀಗಾಗಿ ಕಹಾನಿ-2 ಚಿತ್ರದಲ್ಲಿ ವಿದ್ಯಾಳ ಸ್ಥೈರ್ಯವನ್ನ ಮೆಚ್ಚಬಹುದು. ಇನ್ನೂ ಅವರು ಈಗಾಗಲೇ  ಕಹಾನಿ-2 ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. 
 
ಇನ್ನೂ ಚಿತ್ರವನ್ನು ಸಂಜಯ್ ಘೋಷ ನಿರ್ದೇಶನ ಮಾಡಿದ್ದಾರೆ..ಮೊದಲ ಬಾರಿಗೆ ಅರ್ಜುನ್ ರಾಮಪಾಲ್ ಹಾಗೂ ವಿದ್ಯಾ ಜೊತೆಯಾಗಿ ನಟಿಸುತ್ತಿರುವುದು ವಿಶೇಷ. ಲೀಡ್ ರೋಲ್‌ನಲ್ಲಿ ಇವರಿಬ್ಬರು ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ ರಾಮಪಾಲ್- ವಿದ್ಯಾ ಅಭಿಮಾನಿಗಳಿಗೆ ಈ ಚಿತ್ರದಲ್ಲಿ ನೋಡುವ ಅವಕಾಶ ದೊರಕಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ