ಅಪಾಯದಿಂದ ಸ್ವಲ್ಪದರಲ್ಲೇ ಪಾರಾದ ದುನಿಯಾ ವಿಜಿ

ಶುಕ್ರವಾರ, 28 ಆಗಸ್ಟ್ 2015 (10:40 IST)
RX  ಸೂರಿ ಸಿನಿಮಾದ ಫೈಟಿಂಗ್ ವೇಳೆ ದುನಿಯಾ ವಿಜಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಬೆಂಗಳೂರಿನ ರಾಜ್ ಕುಮಾರ್ ರಸ್ತೆಯಲ್ಲಿ  ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ದುನಿಯಾ ವಿಜಿ ಅವರ ಮೇಲೆ ಆಟೋವೊಂದು ಬೀಳುವಂತಾಗಿತ್ತು. ಆದ್ರೆ ಅದೃಷ್ಟವಶಾತ್ ವಿಜಿ ಬಚಾವ್ ಆಗಿದ್ದಾರೆ.
   

 
ರಿಲೀಸ್ ಗೂ ಮುನ್ನವೇ ಸಾಕಷ್ಟು ಕುತೂಹಲ ಹುಟ್ಟಿಸಿದ್ದ RX  ಸೂರಿ ಸಿನಿಮಾ ತಂಡ ಮೊನ್ನೆ ಮೊನ್ನೆಯಷ್ಟೇ ಸಿನಿಮಾದ ಮೂರು  ಬ್ಯೂಟಿಫುಲ್ ಸಾಂಗ್ ಗಳನ್ನು ರಿಲೀಸ್ ಮಾಡಿದೆ. ಸಿನಿಮಾದ ಮೇಕಿಂಗ್ ಹಾಗೂ ಹಾಡುಗಳು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಹುಟ್ಟು ಹಾಕಿದೆ.  
      
ಇನ್ನು ಸಿನಿಮಾದಲ್ಲಿ ದುನಿಯಾ ವಿಜಿ ನಾಯಕನಾಗಿ ಕಾಣಿಸಿಕೊಂಡಿದ್ದು, ವಿಜಿಗೆ ಜೋಡಿಯಾಗಿ ಆಕಾಂಕ್ಷ ಕಾಣಿಸಿಕೊಂಡಿದ್ದಾರೆ. ರಿಯಲ್ ಸ್ಟೋರಿ ಆಧಾರಿತ ಸಿನಿಮಾ ಇದಾಗಿದ್ದು, ಕೆ.ಎ. ಸುರೇಶ್ ಸಿನಿಮಾದ ನಿರ್ಮಾಪಕ ಜವಬ್ದಾರಿ ಹೊತ್ತುಕೊಂಡಿದ್ದಾರೆ ಇನ್ನು ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಹೆಚ್.ಸಿ. ವೇಣು ಕ್ಯಾಮೆರಾ ಕಣ್ಣಾಗಿದ್ದಾರೆ.

ವೆಬ್ದುನಿಯಾವನ್ನು ಓದಿ