ಮುಂಬೈ : ಬಾಲಿವುಡ್ ನಟ-ನಟಿಯರು ಡೇಟಿಂಗ್ ವಿಚಾರ ಕುರಿತಾಗಿ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಅದೇರೀತಿ ಈ ಹಿಂದೆ ನಟ ಟೈಗರ್ ಶ್ರಾಫ್ ಹಾಗೂ ನಟಿ ದಿಶಾ ಪಠಾನಿ ಅವರ ಡೇಟಿಂಗ್ ಬಗ್ಗೆ ರೂಮರ್ಸ್ ಗಳು ಕೂಡ ಕೇಳಿಬಂದಿದ್ದವು. ಇದೀಗ ನಟಿ ದಿಶಾ ಪಠಾನಿ ಅವರು ನಟ ಟೈಗರ್ ಶ್ರಾಫ್ ಅವರ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸುವುದರ ಮೂಲಕ ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಮೂಡಿಸಿದ್ದಾರೆ.
ಟೈಗರ್ ಶ್ರಾಫ್ ಹಾಗೂ ದಿಶಾ ಪಠಾನಿ ಅವರು ನಟಿಸಿದ 'ಬಾಘಿ 2' ಚಿತ್ರ ಸದ್ಯಕ್ಕೆ ಬಿಡುಗಡೆಯ ಹಂತದಲ್ಲಿದ್ದು, ಈ ಜೋಡಿ ಈಗ ಚಿತ್ರದ ಪ್ರಮೋಷನ್ ಕಾರ್ಯದಲ್ಲಿ ಬ್ಯುಸಿಯಿದ್ದಾರೆ. ಆ ವೇಳೆ ಟೈಗರ್ ಜತೆ ಡೇಟಿಂಗ್ ಕುರಿತು ದಿಶಾ ಅವರನ್ನು ಪ್ರಶ್ನಿಸಿದಾಗ ಅದಕ್ಕೆ ಉತ್ತರಿಸಿದ ಅವರು,’ ಸಿನಿಮಾ ಥಿಯೇಟರ್, ರೆಸ್ಟೋರೆಂಟ್‌ಗಳಲ್ಲಿ ಜನರು ನಮ್ಮನ್ನು ನೋಡಿರುತ್ತಾರೆ. ಇದನ್ನೇ ಹಲವು ವಿಧಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಪರಿಣಾಮ ನಮ್ಮ ಪ್ರತಿಯೊಂದು ಚಲನವಲನಗಳ ಬಗ್ಗೆ ತಿಳಿದುಕೊಳ್ಳಲು ಜನರು ಆಸಕ್ತರಾಗುತ್ತಾರೆ. ಚಿತ್ರರಂಗದಲ್ಲಿ ನಂಗೆ ಯಾರು ಸ್ನೇಹಿತರಿಲ್ಲ. ಕೇವಲ ಟೈಗರ್ ಶ್ರಾಫ್ ಮಾತ್ರ ಗುಡ್ ಫ್ರೆಂಡ್. ಅವರ ಹಾಗೂ ನನ್ನ ನಡುವೆ ನಿಷ್ಕಾಮ ಸ್ನೇಹವಿದೆ. ಅವರು ತುಂಬ ವಿನಮ್ರ ಹಾಗೂ ಪರೋಪಕಾರಿ ಜೀವಿ. ಇದು ಅವರ ಕುಟುಂಬದಿಂದ ಬಂದಿದೆ’ ಎಂದು ಟೈಗರ್ ಶ್ರಾಫ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ