ಶಿಸ್ತಿನ ಸಿಪಾಯಿ ನಿರ್ದೇಶಕ ಎಸ್ ನಾರಾಯಣ್ ಸೊಸೆಗೆ ಹೀಗೆಲ್ಲಾ ಮಾಡಿದ್ರಾ: ಕೇಸ್ ದಾಖಲು

Krishnaveni K

ಗುರುವಾರ, 11 ಸೆಪ್ಟಂಬರ್ 2025 (11:43 IST)
Photo Credit: X
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಶಿಸ್ತಿನ ನಿರ್ದೇಶಕ ಎಂದೇ ಖ್ಯಾತರಾಗಿರುವ ಎಸ್ ನಾರಾಯಣ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಅವರ ವಿರುದ್ಧ ಸೊಸೆ ಪವಿತ್ರಾ ಪೊಲೀಸರಿಗೆ ದೂರು ನೀಡಿದ್ದಾಳೆ.
 

ಎಸ್ ನಾರಾಯಣ್ ಪುತ್ರ ಪವನ್ ಪತ್ನಿ ಪವಿತ್ರಾ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿ ಜ್ಞಾನಭಾರತಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಮಾವ ಎಸ್ ನಾರಾಯಣ್, ಅತ್ತ ಭಾಗ್ಯವತಿ ಮತ್ತು ಗಂಡ ಪವನ್ ವಿರುದ್ಧ ಪವಿತ್ರಾ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿದ್ದಾರೆ.

2021 ರಲ್ಲಿ ಇವರ ವಿವಾಹ ಅದ್ಧೂರಿಯಾಗಿ ನೆರವೆರಿತ್ತು. ಮದುವೆಯನ್ನು ಚೆನ್ನಾಗಿಯೇ ಮಾಡಿಕೊಡಲಾಗಿತ್ತು. ಮದುವೆ ಸಮಯದಲ್ಲೇ ವರದಕ್ಷಿಣೆ ಕೊಟ್ಟರೂ ಹೆಚ್ಚಿನ ಹಣಕ್ಕೆ ಒತ್ತಾಯ ಮಾಡುತ್ತಿದ್ದರು.

ಪವನ್ ಗೆ ಕೆಲಸವಿರಲಿಲ್ಲ. ಹೀಗಾಗಿ ನಾನೇ ಮನೆ ನಡೆಸುತ್ತಿದ್ದೆ.  ಈ ನಡುವೆ ಕಲಾಸಾಮ್ರಾಟ್ ಟೀಂ ಅಕಾಡಮಿ ಎಂದು ಸಂಸ್ಥೆ ನಿರ್ಮಿಸಿದರು. ಅದಕ್ಕೆ ನನ್ನ ತಾಯಿಯ ಒಡವೆ ಅಡವಿಟ್ಟು ಹಣ ತಂದುಕೊಟ್ಟಿದ್ದೆ. ಆದರೆ ಅದು ಲಾಸ್ ಆಯಿತು. ಬಳಿಕ ಗಂಡನಿಗೆ ನನ್ನ ಹೆಸರಿನಲ್ಲಿ 10 ಲಕ್ಷ ರೂ. ಸಾಲ ತೆಗೆಸಿಕೊಟ್ಟಿದ್ದೆ. ಇಷ್ಟೆಲ್ಲಾ ಮಾಡಿದರೂ ಈಗ ನನ್ನನ್ನೇ ಮನೆಯಿಂದ ಹೊರಹಾಕಿದ್ದಾರೆ ಎಂದು ಸೊಸೆ ದೂರು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ