ಮುಂಬೈ: ಇತ್ತೀಚೆಗೆ ಮುಂಬೈನ ಜಿಯೋ ಸೆಂಟರ್ ನಲ್ಲಿ ನಡೆದಿದ್ದ ಅನಂತ್ ಅಂಬಾನಿ ಅದ್ಧೂರಿ ಮದುವೆಯಲ್ಲಿ ಹಲವಾರು ಖ್ಯಾತನಾಮರ ಜೊತೆ ಬಾಲಿವುಡ್ ನಟಿ ಜಾನ್ವಿ ಕಪೂರ್ ಕೂಡಾ ಭಾಗಿಯಾಗಿದ್ದರು.
ಆದರೆ ಮದುವೆ ಮನೆಯಲ್ಲಿ ಊಟ ಮಾಡಿದ ಬಳಿಕ ನಟಿ ಜಾನ್ವಿ ಕಪೂರ್ ಗೆ ಆರೋಗ್ಯವೇ ಕೈ ಕೊಟ್ಟಿದೆಯಂತೆ. ಮದುವೆಯಲ್ಲಿ ಪಾಲ್ಗೊಂಡು ಭರ್ಜರಿ ಭೋಜನ ಸವಿದಿದ್ದ ಜಾನ್ವಿಗೆ ಬಳಿಕ ಫುಡ್ ಪಾಯ್ಸನ್ ಆಗಿದೆ ಎನ್ನಲಾಗಿದೆ. ಈ ಬಗ್ಗೆ ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ವೈದ್ಯರು ಈಗ ಮೂರು ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಮದುವೆ ಮಗಿದ ಬಳಿಕ ಜಾನ್ವಿ ಕುಟುಂಬದವರೊಂದಿಗೆ ಚೆನ್ನೈಗೆ ತೆರಳಿದ್ದರು. ಅಲ್ಲಿನ ಆಹಾರ ಸೇವನೆಯಿಂದ ಈ ರೀತಿ ಆಗಿದೆಯೋ ಎಂಬುದೂ ಸ್ಪಷ್ಟವಾಗಿಲ್ಲ. ಆದರೆ ಚೆನ್ನೈನಲ್ಲಿದ್ದಾಗ ತೀವ್ರ ಅಸ್ವಸ್ಥರಾಗಿ ಕುಸಿದುಬಿದ್ದಿದ್ದಾರೆ. ಬಳಿಕ ತಂದೆ ಬೋನಿ ಕಪೂರ್ ಮುಂಬೈಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ ಎನ್ನಲಾಗಿದೆ.
ಸದ್ಯಕ್ಕೆ ಜಾನ್ವಿ ಆರೋಗ್ಯ ಸುಧಾರಿಸಿಕೊಳ್ಳುತ್ತಿದೆ ಎಂದು ತಿಳಿದುಬಂದಿದೆ. ಸಿನಿಮಾಗಳ ವಿಚಾರಕ್ಕೆ ಬಂದರೆ ಜಾನ್ವಿ ಈಗ ಟಾಲಿವುಡ್ ನಲ್ಲೂ ಸಾಕಷ್ಟು ಅವಕಾಶ ಪಡೆಯುತ್ತಿದ್ದಾರೆ. ಜ್ಯೂ ಎನ್ ಟಿಆರ್ ಜೊತೆಗೆ ಒಂದು ಸಿನಿಮಾ ಮಾಡುತ್ತಿದ್ದಾರೆ.