ವೀರೇಂದ್ರ ಸೆಹ್ವಾಗ್ ಟ್ವೀಟ್ ಓದಿ ರಣವೀರ್ ಸಿಂಗ್ ಏನು ಮಾಡ್ತಾರೆ ಗೊತ್ತಾ?
ಶನಿವಾರ, 10 ಡಿಸೆಂಬರ್ 2016 (11:28 IST)
ಮುಂಬೈ: ವೀರೇಂದ್ರ ಸೆಹ್ವಾಗ್ ಆಗಾಗ ಟ್ವಿಟರ್ ನಲ್ಲಿ ಬರೆಯುವ ಟ್ವೀಟ್ ಗಳು ಪಕ್ಕಾ ಮನರಂಜನೆ ಒದಗಿಸುತ್ತದೆ. ಇದನ್ನು ಇಷ್ಟಪಡದವರು ಯಾರೂ ಇಲ್ಲ. ಅದಕ್ಕೆ ರಣವೀರ್ ಸಿಂಗ್ ಕೂಡಾ ಹೊರತಲ್ಲ.
ಶೂಟಿಂಗ್ ಮುಗಿಸಿ ಮಧ್ಯರಾತ್ರಿ ಸುಸ್ತಾಗಿ ಮಲುಗುವ ಮೊದಲೂ ರಣವೀರ್ ಸೆಹ್ವಾಗ್ ಟ್ವೀಟ್ ಗಳನ್ನು ಓದಿಯೇ ಮಲಗುವುದಂತೆ. ಓದುವುದಷ್ಟೇ ಅಲ್ಲ, ವೀರೂ ಟ್ವೀಟ್ ಗಳನ್ನು ಓದಿ ಬೆಡ್ ಮೇಲೆ ಬಿದ್ದು ಬಿದ್ದೂ ನಗುತ್ತಾರಂತೆ. ಅಷ್ಟರಮಟ್ಟಿಗೆ ವೀರೂ ಟ್ವೀಟ್ ಗಳು ಒತ್ತಡ ಕಡಿಮೆ ಮಾಡಿ ನಗು ಮೂಡಿಸುತ್ತಂತೆ.
ಹಾಗಂತ ಸ್ವತಃ ಸೆಹ್ವಾಗ್ ಹೇಳಿಕೊಂಡಿದ್ದಾರೆ. ಅಲ್ಲದೆ ತಾವು ಮಾಡಿದ ಟ್ವೀಟ್ ಗಳನ್ನು ತಾವೇ ಬೇಸರವಾದಾಗ ಓದಿ ಖುಷಿ ಪಡುತ್ತಾರಂತೆ ಸೆಹ್ವಾಗ್. ಅಂತೂ ಮೈದಾನದಲ್ಲಿದ್ದಾಗಲೂ, ನಿವೃತ್ತಿಯಾದ ಮೇಲೂ ಮನರಂಜನೆ ನೀಡುವುದೇ ತನ್ನ ಕೆಲಸ ಎಂದು ನಂಬಿಕೊಂಡಿದ್ದಾರಂತೆ ಸೆಹ್ವಾಗ್.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ