ತಾಳ್ಮೆ ಕಳೆದುಕೊಂಡ ಅಮಿಷಾ ಪಟೇಲ್... ಮಾಧ್ಯಮದವರ ಮೇಲೆ ಸಿಕ್ಕಾ ಪಟ್ಟೆ ಗರಂ

ಬುಧವಾರ, 3 ಆಗಸ್ಟ್ 2016 (10:54 IST)
'ಕಹೋ ನಾ ಪ್ಯಾರ್ ಹೇ'  ಚಿತ್ರದ ಮೂಲಕ ಅಮಿಷಾ ಪಟೇಲ್ ಯಾರಿಗೆ ಗೊತ್ತಿಲ್ಲ ಹೇಳಿ... ಹೃತಿಕ್ ಜತೆಗೆ ಕುಣಿದಿದ್ದ ಚೆಲುವೆ ಈಗ ಮತ್ತೆ ಸುದ್ದಿಯಾಗಿದ್ದಾಳೆ. ಇಚೆಗಷ್ಟೇ ಮಾಧ್ಯಮದವರ ಜತೆಗೆ ಸ್ಟೇಜ್ ಮೇಲೆ ಕೆಟ್ಟ ಮನಸ್ಥಿತಿ ತೋರ್ಪಡಿಸಿದ್ದಾರೆ. ಮಾಧ್ಯಮದವರ ಮೇಲೆ ಅಸಭ್ಯವಾಗಿ ನಡೆದುಕೊಂಡು ಫುಲ್ ಗರಂ ಆಗಿರುವುದು ತಿಳಿದು ಬಂದಿದೆ. 

 
15 ವರ್ಷದ ಕೆರಿಯರ್‌ನಲ್ಲಿ ಅಮಿಷಾ ಪಟೇಲ್ ಹೆಚ್ಚು ಹೆಚ್ಚಾಗಿ ಸುದ್ದಿ ಹಾಗೂ ಹೆಡ್‌ಲೈನ್ಸ್ ಆಗಿದ್ದೇ ತಪ್ಪು ಕಾರಣಗಳಿಂದಾಗಿ .. ಇದೀಗ ಮತ್ತೆ ಅಮಿಷಾ ಇದೇ ಕಾರಣಕ್ಕಾಗಿ ಸುದ್ದಿಯಾಗಿದ್ದಾಳೆ.. ಇಚೆಗಷ್ಟೇ ಮಾಧ್ಯಮದವರ ಮೇಲೆ ಅಸಭ್ಯವಾಗಿ ನಡೆದುಕೊಂಡು ಫುಲ್ ಗರಂ ಆಗಿರುವುದು ತಿಳಿದು ಬಂದಿದೆ. 
 
ಅಂದಹಾಗೆ ಅಮಿಷಾ ಪಟೇಲ್ ಮುಂಬರುವ ಚಿತ್ರ ಭಯ್ಯಾಜಿ ಸೂಪರ್ ಹಿಟ್ ಚಿತ್ರದ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ನಿರ್ಮಾಪಕರು ಹಾಗೂ ನಿರ್ದೇಶಕರು ಸುದ್ದಿಗೋಷ್ಠಿ ಹಮ್ಮಿಕೊಂಡಿರುವುದರ ಬಗ್ಗೆ ಅಮಿಷಾಗೆ ಯಾವುದೇ ಮಾಹಿತಿ ಇರಲಿಲ್ಲ. ಸುದ್ದಿಗೋಷ್ಟಿ ವೇಳೆ ಅಲ್ಲೇ ಇದ್ದ ಅಮಿಷಾ ಪಟೇಲ್, ಇದೇ ವೇಳೆ ಅಮಿಷಾ ಪಟೇಲ್, ಪ್ರೀತಿ ಜಿಂಟಾ ಹಾಗೂ ಸನ್ನಿ ಡಿಯೋಲ್‌ಗೆ ಸುದ್ದಿಗೋಷ್ಠಿ ಇದೇ ಎಂಬುದರ ಬಗ್ಗೆ ಮಾಹಿತಿ ಇತ್ತು.
 
ಸುದ್ದಿಗೋಷ್ಠಿ ನಡೆಯುತ್ತಿದ್ದ ವೇಳೆ ಅಮಿಷಾ ಇದ್ದಕಿದ್ದಂತೆ ತನಗೆ ಸುದ್ದಿಗೋಷ್ಟಿ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ ಅಂತ ಫುಲ್ ಗರಂ ಆಗಿದ್ದರು... ಕೆಟ್ಟ ಮನಸ್ಥಿತಿಯಲ್ಲಿ ಕಂಡು ಬಂದ ಅಮಿಷಾ, ಈ ವೇಳೆ ಮಾಧ್ಯಮದವರ ಮೇಲೆ ತಮ್ಮ ಸಿಟ್ಟನ್ನು ವ್ಯಕ್ತಪಡಿಸಿದ್ದರು. ಮಾಧ್ಯಮದವರ ಕೇಳಲಾದ ಪ್ರಶ್ನೆಗೆ ಸಿಟ್ಟಿನಿಂದ ವ್ಯಂಗ್ಯವಾಗಿ ಉತ್ತರಿಸಿ ಎದ್ದು ನಡೆದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ