ಒಕೆ ಜಾನು ಸಿನಿಮಾದಲ್ಲಿ ಅಭಿನಯಿಸಲು ಕಾತುರರಾಗಿದ್ದಾರೆ ಆದಿತ್ಯಾ ರಾಯ್ ಕಪೂರ್

ಸೋಮವಾರ, 8 ಫೆಬ್ರವರಿ 2016 (11:13 IST)
ಆಶಿಕಿ-2 ಸಿನಿಮಾದ ಮೂಲಕ ಮೋಡಿ ಮಾಡಿದ್ದ ಜೋಡಿ ಶ್ರದ್ಧಾ ಕಪೂರ್ ಹಾಗೂ ಆದಿತ್ಯಾ ರಾಯ್ ಕಪೂರ್  ಮತ್ತೆ  ಅಭಿಮಾನಿಗಳನ್ನು ಮೋಡಿ ಮಾಡೋದಕ್ಕೆ ಬರುತ್ತಿದ್ದಾರೆ. ಅಭಿಮಾನಿಗಳಲ್ಲಿ ಸಿನಿಮಾದ ಬಗ್ಗೆ ಎಷ್ಟು ಕುತೂಹಲವಿದೆಯೋ ಹಾಗೇ ಸಿನಿಮಾದ ಬಗ್ಗೆ ಆದಿತ್ಯಾ ರಾಯ್ ಕಪೂರ್ ಅವರಿಗೂ ಕುತೂಹಲವಿದೆಯಂತೆ.
  
ತಮಿಳಿನಲ್ಲಿ ಖ್ಯಾತ ನಿರ್ದೇಶಕ ಮಣಿರತ್ನಂ ಅವರು ನಿರ್ದೇಶಿಸಿದ್ದ ಒಕೆ ಕಣ್ಮಣಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅದೇ ಸಿನಿಮಾವನ್ನ ಒಕೆ ಜಾನು ಹೆಸರಿನಲ್ಲಿ ಹಿಂದಿಗೆ ರಿಮೇಕ್ ಮಾಡುತ್ತಿದ್ದಾರೆ ನಿರ್ದೇಶಕ ಶಾದ್ ಅಲಿ. ಈ ಸಿನಿಮಾದಲ್ಲಿ ಆದಿತ್ಯಾ ಹಾಗೂ ಶ್ರದ್ಧಾ ಕಪೂರ್ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಸಿನಿಮಾದಲ್ಲಿ ಎರಡನೇ ಬಾರಿಗೆ ಶ್ರದ್ಧಾ ಕಪೂರ್ ಜೊತೆ ಅಭಿನಯಿಸುತ್ತಿರೋದಕ್ಕೆ ಆದಿ ಫುಲ್ ಖುಷಿಯಾಗಿದ್ದಾರಂತೆ. ಯಾವಾಗ ಶೂಟಿಂಗ್ ಆರಂಭವಾಗುತ್ತೆ ಅಂತಾ ಎಕ್ಸೈಟ್ ಆಗಿದ್ದಾರೆ.
 
ಇನ್ನು ಈ ಸಿನಿಮಾದಲ್ಲಿ ಶೂಟಿಂಗ್ ಮುಂದಿನ ತಿಂಗಳಿನಿಂದ ಆರಂಭವಾಗಲಿದೆಯಂತೆ. ಸದ್ಯ ಆದಿತ್ಯಾ ತಮ್ಮ ಫಿತೂರ್ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಯಿಯಾಗಿರೋದರಿಂದ ಸಿನಿಮಾದ ಶೂಟಿಂಗ್ ಮುಂದಿನ ತಿಂಗಳಿನಿಂದ ಆರಂಭವಾಗಲಿದೆ. ಫಿತೂರ್ ಸಿನಿಮಾ ಇದೇ ತಿಂಗಳ 12 ರಂದು ರಿಲೀಸ್ ಆಗ್ತಿದೆ.
 

ವೆಬ್ದುನಿಯಾವನ್ನು ಓದಿ