ವರುಣ್ ಧವನ್ ಕ್ರಿಕೆಟ್ ದಿಗ್ಗಜ ಸಚಿನ್‌ರನ್ನು ಭೇಟಿ ಮಾಡಿದ ಕ್ಷಣ

ಶುಕ್ರವಾರ, 17 ಜೂನ್ 2016 (17:53 IST)
ಬಾಲಿವುಡ್ ನಟ ವರುಣ್ ಧವನ್ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿ ಮಾಡಿದ್ದಾರೆ.ಇಂಡಿಯನ್ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಜತೆಯಲ್ಲಿರುವ ಫೊಟೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. 
ವರುಣ್ ಅಭಿನಯದ ಮುಂಬರುವ ಚಿತ್ರ 'ಡಿಶೂಂ' ಚಿತ್ರದ ಪ್ರಚಾರಕ್ಕೆಂದು ತೆರಳಿದ್ದ ವೇಳೆ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಅವರನ್ನು ವರುಣ್ ಭೇಟಿ ಮಾಡಿದ್ದಾರೆ. ಈ ಚಿತ್ರದಲ್ಲಿ ವರುಣ್ ಸಚಿನ್ ಅವರಿಗೆ ನಮಸ್ತೆ ಮಾಡುತ್ತಿರುವ ಪೋಸ್ ನಲ್ಲಿ ನಿಂತಿರುವುದನ್ನು ಇಲ್ಲಿ ನೋಡಬಹುದು. ಅಂದಹಾಗೆ ಡಿಶೂಂ ಚಿತ್ರದಲ್ಲಿ ವರುಣ್ ಜುನೈದ್ ಅನ್ಸಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 
 
ಇನ್ನೂ ಜುಲೈ ವರೆಗೂ ವರುಣ್ ಧವನ್ ಚಿತ್ರದ ಪ್ರಚಾರ ಮಾಡಲಿದ್ದಾರೆ. ಜಾನ್ ಅಬ್ರಾಹಮ್, ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ.

ಇನ್ನೂ ಡಿಶೂಂ ಚಿತ್ರಕ್ಕಾಗಿ ವರುಣ್ ಧವನ್ ಸಖತ್ತಾಗಿ  ವರ್ಕೌಟ್  ಮಾಡಿದ್ದಾರೆ. ಈ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ವರುಣ್ ಧವನ್ ತಾವು ಫಿಸಿಕಲ್ ವರ್ಕೌಟ್‌ನಲ್ಲಿ ತೊಡಗಿರುವ ಕೆಲ ಫೊಟೋಗಳನ್ನು ಶೇರ್  ಮಾಡಿದ್ದರು. ಈ ಚಿತ್ರಕ್ಕಾಗಿ ವರುಣ್  ಧವನ್ ತಮ್ಮ ಕಟ್ಟುಮಸ್ತಾದ ದೇಹಕ್ಕಾಗಿ ವರ್ಕೌಟ್ ಮಾಡುತ್ತಿರುವುದರ ತಿಳಿಸಿದ್ದರು. 
 
ಆ್ಯಕ್ಷನ್ ಹಿರೋ ಜಾನ್ ಅಬ್ರಾಹಂ,ವರುಣ್ ಅಭಿನಯದ ಧೂಮ್ ಚಿತ್ರಕ್ಕಿಂತಲೂ ಡಿಶೂಂ ಚಿತ್ರ ವಿಭಿನ್ನವಾಗಿದೆ ಎಂದು ಇತ್ತೀಚೆಗೆ ಜಾನ್ ಅಬ್ರಾಹಂ ಹಾಗೂ ವರುಣ್ ಧವನ್ ತಿಳಿಸಿದ್ದರು.ಡಿಶೂಂ ಟ್ರೇಲರ್ ಫುಲ್ ಆ್ಯಕ್ಷನ್ ಡ್ರಾಮಾ ಒಳಗೊಂಡಿದ್ದು, ಚಿತ್ರದಲ್ಲಿ ನರ್ಗಿಸ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಜುಲೈ 29ಕ್ಕೆ ರಿಲೀಸ್ ಆಗಲಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ