ನಟಿ ಪ್ರಿಯಾಂಕ ಚೋಪ್ರಾರವರ ರಿಯಲ್ ಚಾಂಪಿಯನ್ ಯಾರು ಗೊತ್ತಾ…?

ಸೋಮವಾರ, 16 ಏಪ್ರಿಲ್ 2018 (06:19 IST)
ಮುಂಬೈ : 2018 ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಬಾಕ್ಸರ್ ಮೇರಿ ಕೋಮ್ ಅವರಿಗೆ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ಶುಭಾಶಯ ಕೋರಿದ್ದಾರೆ.


ಆಸ್ಟೇಲಿಯಾದ ಗೋಲ್ಟ್ ಕಾಸ್ಟ್ ನಲ್ಲಿ ನಡೆಯುತ್ತಿರುವ 2018ರ ಕಾಮನ್ ವೆಲ್ತ್ ಮಹಿಳೆಯರ ಬಾಕ್ಸಿಂಗ್ ಪಂದ್ಯದಲ್ಲಿ ಫೈನಲ್ ಪ್ರವೇಶಿಸಿದ್ದ ಮೇರಿ ಕೋಮ್ ಅವರು ಐರ್ಲೆಂಡಿನ ಕ್ರಿಸ್ಟಿನಾ ಹೊರಾ ಅವರನ್ನು 5-0 ಅಂತರರಿಂದ ಮಣಿಸಿ ಚಿನ್ನದ ಪದಕ ಗೆದಿದ್ದರು. ಈಗಾಗಲೇ ಐದು ಬಾರಿ ವಿಶ್ವಚಾಂಪಿಯನ್ ಪಟ್ಟ ಗಳಿಸಿರುವ ಮೇರಿ ಕೋಮ್ ಅವರ ಈ ಸಾಧನೆಯ ಬಗ್ಗೆ ನಟಿ ಪ್ರಿಯಾಂಕ ಚೋಪ್ರ ಅವರು  ಟ್ವೀಟ್ ಮಾಡಿ,’ ನನ್ನ ಸ್ನೇಹಿತೆಯ ಈ ಸಾಧನೆ ನನಗೆ ಹೆಮ್ಮೆ ತಂದಿದೆ. ಮೇರಿ ಕೋಮ್ ಎಂದಿಗೂ ನನ್ನ ಚಾಂಪಿಯನ್ ‘ ಎಂದು ತಿಳಿಸಿ ಶುಭಾಶಯ ಕೋರಿದ್ದಾರೆ.


ನಟಿ ಪ್ರಿಯಾಂಕ ಚೋಪ್ರ ಅವರು  2014 ರಲ್ಲಿ ತೆರೆಕಂಡ ಮೇರಿ ಕೋಮ್ ಅವರ ಜೀವನಾಧಾರಿತ ಚಿತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರದ ನಿರ್ದೇಶಕರಾದ ಓಮುಂಗ್ ಕುಮಾರ್ ಸಹ ಮೇರಿ ಕೋಮ್ ಅವರಿಗೆ ಈ ಬಗ್ಗೆ ಅಭಿನಂದನೆ ಸಲ್ಲಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ