ಎಐಎಡಿಎಂಕೆ ಪಕ್ಷ ವಿಜಯ್ ‘ಸರ್ಕಾರ್’ ಚಿತ್ರವನ್ನು ವಿರೋಧಿಸಿದಕ್ಕೆ ನಟನ ಅಭಿಮಾನಿಗಳು ಮಾಡಿದ್ದೇನು ಗೊತ್ತಾ?
ಸೋಮವಾರ, 12 ನವೆಂಬರ್ 2018 (07:06 IST)
ಚೆನ್ನೈ : ತಮಿಳಿನ ಖ್ಯಾತ ನಟ ವಿಜಯ್ ಅಭಿನಯದ ‘ಸರ್ಕಾರ್’ ಚಿತ್ರಕ್ಕೆ ಎಐಎಡಿಎಂಕೆ ಪಕ್ಷದವರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಇದೀಗ ವಿಜಯ್ ಅಭಿಮಾನಿಗಳು ರಾಜಕೀಯ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯ್ ನಟಿಸಿದ ಸರ್ಕಾರ್ ಸಿನಿಮಾ ದೀಪಾವಳಿ ಹಬ್ಬದಂದು ಜಗತ್ತಿನಾದ್ಯಂತ ಬಿಡುಗಡೆಗೊಂಡಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಸಿನಿಮಾದ ಕೆಲ ದೃಶ್ಯಗಳಲ್ಲಿ ಟಿವಿ, ಲ್ಯಾಪ್ಟಾಪ್ ಹಾಗೂ ಮಿಕ್ಸಿಗಳನ್ನು ಬೆಂಕಿಗೆ ಹಾಕುವ ದೃಶ್ಯವಿದ್ದು, ಇದಕ್ಕೆ ಎಐಎಡಿಎಂಕೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನಲೆಯಲ್ಲಿ ಸರ್ಕಾರ್ ಚಿತ್ರತಂಡ ಆ ದೃಶ್ಯಗಳಿಗೆ ಕತ್ತರಿ ಹಾಕುವುದಾಗಿ ಹೇಳಿವುದರ ಮೂಲಕ ಈ ವಿವಾದಕ್ಕೆ ತೆರೆ ಎಳೆದಿದೆ.
ಆದರೆ ರಾಜಕೀಯ ಪಕ್ಷದ ಈ ವರ್ತನೆಗೆ ಆಕ್ರೋಶಗೊಂಡಿರುವ ನಟ ವಿಜಯ್ ಅಭಿಮಾನಿಗಳು ಚಿತ್ರದಲ್ಲಿನ ದೃಶ್ಯದಂತೆ ಟಿವಿ, ಲ್ಯಾಪ್ಟಾಪ್ಗಳಿಗೆ ಬೆಂಕಿ ಹಾಕಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇದಲ್ಲದೆ ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ