ಕರುಣಾನಿಧಿ ಕುಟುಂಬವು ‘ಸರ್ಕಾರ್’ ಸಿನಿಮಾ ನಿರ್ಮಾಣಕ್ಕೆ ಹಣ ಹೂಡಿರುವುದರಿಂದ ಚುನಾವಣೆ ಉದ್ದೇಶ ಇಟ್ಟುಕೊಂಡೇ ರಾಜಕೀಯ ಪಕ್ಷಗಳು ಕೊಡುವ ಮಿಕ್ಸಿ, ಗ್ರೈಂಡರ್, ಕಲರ್ ಟಿವಿಯಂಥ ಉಡುಗೊರೆಗಳನ್ನು ಜನ ಬೀದಿಗೆ ಎಸೆಯುವ ದೃಶ್ಯಗಳನ್ನು ಸೇರಿಸಲಾಗಿದೆ ಎಂದು ಎಐಎಡಿಎಂಕೆ ನಾಯಕರು ಬುಧವಾರ ಆರೋಪಿಸಿದ್ದರು.
ಆದರೆ ಇದೀಗ ಸರ್ಕಾರ್’ ಸಿನಿಮಾದಲ್ಲಿದ್ದ ಈ ದೃಶ್ಯಗಳ ಮೂಲಕ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಅವಹೇಳನ ಮಾಡಲಾಗಿದೆ, ಎಂದು ಪಟ್ಟು ಹಿಡಿದ ಕಾರ್ಯಕರ್ತರು ಮದುರೈನ ಥಿಯೇಟರ್ವೊಂದರಲ್ಲಿ 2.30ರ ಪ್ರದರ್ಶನವನ್ನು ತಡೆಹಿಡಿದಿದ್ದಾರೆ.
ಅಲ್ಲದೇ ಕೊಯಮತ್ತೂರಿನ ಸಿನಿಮಾ ಮಂದಿರ ಹಾಗೂ ಚೆನ್ನೈನ ಕಾಸಿ ಥಿಯೇಟರ್ನ ಎದುರು ಅಂಟಿಸಲಾಗಿದ್ದ ಸರ್ಕಾರ್ ಸಿನಿಮಾದ ಪೋಸ್ಟರ್ಗಳನ್ನು ಜಯಾ ಬೆಂಬಲಿಗರು ಹರಿದು ಹಾಕಿರುವುದಾಗಿಯೂ ವರದಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.