ಜಾನ್ ಅಬ್ರಾಹಂರವರು ಪ್ರೇರಣಾ ಅರೋರಾ ವಿರುದ್ಧ ದೂರು ದಾಖಲಿಸಲು ಕಾರಣವೇನು..?
ಸೋಮವಾರ, 9 ಏಪ್ರಿಲ್ 2018 (06:51 IST)
ಮುಂಬೈ : ಬಾಲಿವುಡ್ ನಟ, ನಿರ್ಮಾಪಕರಾದ ಜಾನ್ ಅಬ್ರಾಹಂ ಅವರು ಪ್ರೇರಣಾ ಅರೋರಾ ಹಾಗೂ ಅವರ ಎಂಟರ್ ಟೈನ್ ಮೆಂಟ್ ಸಂಸ್ಥೆಯ ಮೇಲೆ ವಂಚನೆ ಹಾಗೂ ಮಾನನಷ್ಟ ಪ್ರಕರಣ ದಾಖಲಿಸಿದ್ದಾರೆ.
ಒಪ್ಪಂದ ಒಂದರ ಮೇರೆಗೆ ಜಾನ್ ಅಬ್ರಾಹಂ ಅವರ 'ಜೆಎ ಎಂಟರ್‌ಟ್ರೈನ್‌ಮೆಂಟ್' ಹಾಗೂ ಪ್ರೇರಣಾ ಅವರ 'ಕ್ರಿರಿಜ್ ಎಂಟರ್‌ಟ್ರೈನ್‌ಮೆಂಟ್' ಸಂಸ್ಥೆ ಎರಡು ಜೊತೆ ಸೇರಿ ‘ಪರಮಾಣು’ ಚಿತ್ರವನ್ನು ಪ್ರೊಡ್ಯೂಸ್ ಮಾಡಲು ಒಪ್ಪಿಕೊಂಡಿದ್ದು, ಒಪ್ಪಂದದ ಪ್ರಕಾರ ನಟರ ಸಂಭಾವನೆ, ಜಾಹೀರಾತು ಖರ್ಚು ಸೇರಿದಂತೆ 35 ಕೋಟಿ ರೂ, ಕಿರಿಜ್ ಸಂಸ್ಥೆಯು ಜೆಎ ಸಂಸ್ಥೆಗೆ ನೀಡಬೇಕಿತ್ತು. ಆದರೆ ಪ್ರೇರಣಾ ಅವರು ತಪ್ಪು ಬ್ಯಾಂಕ್ ದಾಖಲೆಗಳನ್ನು ನೀಡಿದಲ್ಲದೇ ಕೊನೆಯ ಹಂತದ ಸಂಭಾವನೆ ನೀಡಲು ಕೂಡ ನಿರಾಕರಿಸಿದ್ದಾರೆ.ಆದಕಾರಣ ಜಾನ್ ಅಬ್ರಾಹಂ ಅವರು ಪ್ರೇರಣಾ ವಿರುದ್ಧ ಕಾನೂನು ಮೂಲಕ ನೋಟಿಸ್ ನೀಡಿ ಈ ಒಪ್ಪಂದದಿಂದ ಹೊರ ಬಂದಿದ್ದರು.
ಇದಾದ ನಂತರ ಪ್ರೇರಣಾ ಅವರು ಜಾನ್ ಅವರ ವಿರುದ್ಧ ಸುಳ್ಳು ಕ್ರಿಮಿನಲ್ ಪ್ರಕರಣ ದಾಖಲಿಸಿ ಮಾಧ್ಯಮಗಳಲ್ಲಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಹಾಗೇ ಚಿತ್ರದ ಪ್ರಚಾರಕ್ಕೂ ಕೂಡ ತೊಡಕನ್ನುಂಟುಮಾಡಿದ್ದರು. ಆದಕಾರಣ ಇದೀಗ ಜಾನ್ ಅಬ್ರಾಹಂ ಅವರು ಮುಂಬೈನ ಖೇರ್ ಪೊಲೀಸ್ ಠಾಣೆಯಲ್ಲಿ ಪ್ರೇರಣಾ ವಿರುದ್ಧ ದೂರು ದಾಖಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ