ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಬಿಗ್‌ಬಾಸ್ ವಿನ್ನರ್, ನಟ ಪ್ರಥಮ್ ಅವರು ಆಗಾಗ ಪೋಸ್ಟ್‌ವೊಂದನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
ಇದೀಗ ನಟ ಶೇರ್ ಮಾಡಿರುವ ಪೋಸ್ಟ್ ಭಾರೀ ಕುತೂಹಲವನ್ನು ಮೂಡಿಸುತ್ತದೆ. ಅಮೇರಿಕಾಗೆ ಹೋಗಿದ್ದ ನಟ ಪ್ರಥಮ್ ಅವರು ಅಲ್ಲಿನ ಮಕ್ಕಳ ಅಭ್ಯಾಸದ ಬಗ್ಗೆ ಅಚ್ಚರಿಗೊಂಡು, ಈ ಅಭ್ಯಾಸ ನಮ್ಮ ಮಕ್ಕಳಲ್ಲೂ ಅಳವಡಿಕೆಯಾಗಬೇಕೆಂದು ಬರೆದುಕೊಂಡಿದ್ದಾರೆ.
ನಟ ಪ್ರಥಮ್ ಪೋಸ್ಟ್‌ನಲ್ಲಿ ಏನಿದೆ:
ಸಾಧ್ಯವಾದಷ್ಟು ಶೇರ್ ಮಾಡಿ!ತುಂಬಾ important ಮಾಹಿತಿ!
ಇತ್ತೀಚೆಗೆ ನಾನು ಅಮೇರಿಕಾಗೆ ಹೋಗಿದ್ದೆ,ಅಲ್ಲಿ immigration ನಡೆವಾಗ ನಡೆದ ಘಟನೆ ಇದು... ಯಾರೊಬ್ಬರೂ ಹೆಚ್ಚು ಫೋನ್ ನೋಡ್ತಾ ಇರಲಿಲ್ಲ.. ಸಮಯ ಸಿಕ್ಕ ಕೂಡಲೇ ತಮ್ಮ bag ಇಂದ ಪುಸ್ತಕ ತಗೆದು ಓದುತ್ತಿದ್ರು...ಅಷ್ಟು ಮುಂದುವರೆದ ದೇಶದಲ್ಲಿ ಈಗಲೂ ಓದೋ ಅಭ್ಯಾಸವಿದೆ.. ಸಮಯ waste ಮಾಡಲ್ಲ... ನಾವು ನಮ್ಮ ಮಕ್ಕಳಿಗೆ ಪುಸ್ತಕ ಕೊಡೋ ಬದಲು phone ಕೊಡ್ತೀವಿ.ಮಕ್ಕಳಿಗೆ ಓದೋ ಅಭ್ಯಾಸವೇ ತಪ್ಪಿ ಹೋಗ್ತಿದೆ...!
ಯೋಚಿಸಿ..20 ನಿಮಿಷ immigration ನಡೆಯುತ್ತೆ (passport stamping) ಆ ಸಮಯವನ್ನೂ ಅವ್ರು miss ಮಾಡಲ್ಲ..!
ದಯವಿಟ್ಟು ಶೇರ್ ಮಾಡಿ.ನಮ್ಮವರು ಮಕ್ಕಳಿಗೆ ಪುಸ್ತಕ ಕೈಗೆ ಕೊಡ್ಲಿ.... ಮೊಬೈಲ್ ನೋಡೋ ಪರಂಪರೆ ಕಮ್ಮಿ ಆಗಿ ಓದೋ ಪರಂಪರೆ ಉಳಿಯಲಿ..!ಇಷ್ಟವಾದ್ರೆ ನಾಲ್ಕು ಜನರಿಗೆ share ಮಾಡಿ...very important!????