ಉಡ್ತಾ ಪಂಜಾಬ್ ಸಿನಿಮಾವನ್ನು ಕರೀನಾ ಒಪ್ಪಿಕೊಂಡಿದ್ದೇಕೆ?

ಶುಕ್ರವಾರ, 5 ಫೆಬ್ರವರಿ 2016 (13:32 IST)
ಒಂದು ಕಾಲದಲ್ಲಿ ಬಾಲಿವುಡ್ ಪ್ರೇಮ ಪಕ್ಷಿಗಳಾದ ಶಾಹೀದ್ ಕಪೂರ್ ಹಾಗೂ ಕರೀನಾ ಕಪೂರ್ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಉಡ್ತಾ ಪಂಜಾಬ್. ಮಾಜಿ ಪ್ರೇಮಿಗಳನ್ನು ಒಟ್ಟಿಗೆ ನೋಡುವ ಅವಕಾಶ ಅಭಿಮಾನಿಗಳಿಗೆ ದೊರೆತಿರೋದಕ್ಕೆ ಅಭಿಮಾನಿಗಳು ಖುಷಿಯಾಗಿದ್ರೆ ಸಿನಿಮಾವನ್ನು ಯಾಕೆ ಒಪ್ಪಿಕೊಂಡೇ ಅನ್ನೋದನ್ನು ಬೆಬೋ ಬಾಯ್ಬಿಟ್ಟಿದ್ದಾರೆ.

 
ಹೌದು... ಕರೀನಾ ಕಪೂರ್ ಅವರು ಈ ಸಿನಿಮಾದಲ್ಲಿ ಅಭಿನಯಿಸೋದಕ್ಕೆ ಪ್ರಮುಖ ಕಾರಣ ಸಿನಿಮಾದ ಸ್ಕ್ರಿಫ್ಟ್ ಅಂತೆ. ಸಿನಿಮಾದ ಸ್ಕ್ರಿಫ್ಟೇ ಇದರ ಪ್ಲಸ್ ಪಾಯಿಂಟ್. ಅದೇ ಸಿನಿಮಾದ ರಿಯಲ್ ಹೀರೋ ಅಂತಾ ಕರೀನಾ ಹೇಳಿದ್ದಾರೆ. ಅಲ್ಲದೇ ಇದಕ್ಕಾಗೇ ನಾನು ಈ ಸಿನಿಮಾವನ್ನು ಒಪ್ಪಿಕೊಂಡೆ ಅಂತಾ ಅವರು ಹೇಳಿದ್ದಾರೆ.ಇನ್ನು ಸಿನಿಮಾ ಸೆಟ್ಟೇರೋ ಮುನ್ನ ಶಾಹೀದ್ ಕಪೂರ್ ಅವರೇ ಕರೀನಾ ಜೊತೆ ಅಭಿನಯಿಸುವ ಆಸಕ್ತಿ ವ್ಯಕ್ತಪಡಿಸಿದ್ರು ಆದ್ರೀಗ ಅದು ನಿಜವಾಗಿದೆ.
 
ಅಭಿಷೇಕ್ ಚೌಬೇ ನಿರ್ದೇಶನದ ಈ ಸಿನಿಮಾದಲ್ಲಿ ಕರೀನಾ ಕಪೂರ್, ಶಾಹೀದ್ ಕಪೂರ್ ಹಾಗೂ ಆಲಿಯಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ. ಅಚ್ಚರಿಯ ವಿಚಾರ ಅಂದ್ರೆ ಉಡ್ತಾ ಪಂಜಾಬ್ ನಲ್ಲಿ ಕರೀನಾ ಹಾಗೂ ಶಾಹೀದ್ ಜೊತೆಯಾದ್ರೆ, ರಂಗೂನ್ ಸಿನಿಮಾದಲ್ಲಿ ಕರೀನಾ ಪತಿ ಸೈಫ್ ಆಲಿಖಾನ್ ಹಾಗೂ ಶಾಹೀದ್ ಜೊತೆಯಾಗಿ ಅಭಿನಯಿಸುತ್ತಿದ್ದಾರೆ. ಉಡ್ತಾ ಪಂಜಾಬ್ ಸಿನಿಮಾ ಜೂನ್ 17ಕ್ಕೆ ರಿಲೀಸ್ ಆಗಲಿದೆ.

ವೆಬ್ದುನಿಯಾವನ್ನು ಓದಿ