ಕತ್ರೀನಾ ರೋಮ್ಯಾಂಟಿಕ್ ಸಿನಿಮಾಗಳಲ್ಲೇ ಹೆಚ್ಚಾಗಿ ಯಾಕೆ ನಟಿಸ್ತಾರೆ?

ಬುಧವಾರ, 27 ಜನವರಿ 2016 (10:56 IST)
ಬಾಲಿವುಡ್ ನ ಪ್ರತಿಭಾವಂತ ನಟಿಯರಲ್ಲಿ ಒಬ್ಬರು ಕತ್ರೀನಾ ಕೈಫ್. ಆದ್ರೆ ಬಾಲಿವುಡ್ ನಲ್ಲಿ ಕತ್ರೀನಾ ಕೈಫ್ ಅಭಿನಯಿಸಿರುವ ಸಿನಿಮಾಗಳನ್ನು ನೋಡಿದ್ರೆ ಅದರಲ್ಲಿ ಹೆಚ್ಚಿನ ಎಲ್ಲಾ ಸಿನಿಮಾಗಳು ರೋಮ್ಯಾಂಟಿಕ್ ಸಿನಿಮಾಗಳು.ಆದ್ರೆ ನಾನು ಯಾಕೆ ರೋಮ್ಯಾಂಟಿಕ್ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ ಅನ್ನೋದನ್ನು ಕತ್ರೀನಾ ಬಾಯ್ಬಿಟ್ಟಿದ್ದಾರೆ.
  ಕತ್ರೀನಾ ಅವರು ಸದ್ಯ ಫಿತೂರ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಫಿತೂರ್ ಸಿನಿಮಾ ಕೂಡ ರೋಮ್ಯಾಂಟಿಕ್ ಸಿನಿಮಾ.ಆದ್ರೆ ನಾನು ಇಂತಹ ಸಿನಿಮಾಗಳಲ್ಲೇ ಹೆಚ್ಚಾಗಿ ಅಭಿನಯಿಸೋದಕ್ಕೆ ಕಾರಣ ನನಗೆ ರೋಮ್ಯಾಂಟಿಕ್ ಸಿನಿಮಾಗಳು ಅಂದ್ರೆ ತುಂಬಾ ಇಷ್ಟ.ಅಲ್ಲದೇ ವ್ಯಕ್ತಿಯಾಧಾರಿತ ಸಿನಿಮಾ ಕೂಡ ನನಗೆ ಅಭಿನಯಿಸಲು ತುಂಬಾನೇ ಖುಷಿ ನೀಡುತ್ತವೆ. ಹಾಗಾಗಿ ನಾನು ಇಂತಹ ಸಿನಿಮಾಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತೇನೆ. ಲವ್ ಸ್ಟೋರಿ ಆಧಾರಿತ ಸಿನಿಮಾಗಳು ನನಗೆ ಖುಷಿ ನೀಡುತ್ತವೆ ಅಂತಾ ಅವರು ಹೇಳಿದ್ದಾರೆ.
 
ಫಿತೂರ್ ಸಿನಿಮಾದಲ್ಲಿ ಆಶಿಕಿ -2 ಸಿನಿಮಾ ಖ್ಯಾತಿಯ ಆದಿತ್ಯಾ ರಾಯ್ ಕಪೂರ್ ಕತ್ರೀನಾಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನುಳಿದಂತೆ ನಟಿ ಟಬು ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.ಫಿತೂರ್ ಸಿನಿಮಾ ಫೆಬ್ರವರಿ 12 ರಂದು ರಿಲೀಸ್ ಆಗಲಿದೆ.
 
 

ವೆಬ್ದುನಿಯಾವನ್ನು ಓದಿ