ಕಿಮ್ ಕರ್ದಾಶಿಯನ್ ಈ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದು ಯಾಕೆ ಗೊತ್ತಾ?

ಬುಧವಾರ, 12 ಸೆಪ್ಟಂಬರ್ 2018 (15:10 IST)
ಮುಂಬೈ: ಹಾಟ್ ಬೆಡಗಿ ಕಿಮ್ ಕರ್ದಾಶಿಯನ್ ಸದಾ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಕಿಮ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಚೆರಿ ಹೂವುಗಳನ್ನು ತನ್ನ ದೇಹದ ಭಾಗಗಳಿಗೆ ಸುತ್ತಿಕೊಂಡು ಹಾಟ್ ಆಗಿ ಪೋಸ್ ನೀಡಿದ್ದಾರೆ.


ಇನ್ನು ಕಿಮ್ ಹೊಸ ಮೇಕಪ್ ಕೂಡ ಚೆರಿ ಬ್ಲಾಸಮ್ ಮೇಕಪ್ ಆಗಿದೆ.ಈ ಹಾಟ್ ಫೋಟೋವನ್ನು ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿರುವ ಕಿಮ್, ನನ್ನ ಹೊಸ ಚೆರ್ರಿ ಬ್ಲಾಸಮ್ ಮೇಕಪ್ ಕಲೆಕ್ಷನ್. ಕೆಲವೇ ದಿನಗಳಲ್ಲಿ ನಿಮಗೆ ಲಭ್ಯವೆಂದು ಬರೆದಿದ್ದಾಳೆ.


ಕಿಮ್ ಕರ್ದಾಶಿಯನ್ ಹೊಸ ಮೇಕಪ್ ಸೆಟ್ ನಲ್ಲಿ 10 ಪ್ಯಾನ್ ಐ ಷಾಡೋ ಪ್ಯಾಲೆಟ್, 3 ಬ್ಲಶ್, 8 ಲಿಪ್ ಸ್ಟಿಕ್, 3 ಲಿಪ್ ಲೈನರ್ ಇರಲಿದೆ. ತನ್ನ ಸೌಂದರ್ಯ ವರ್ಧಕಗಳ ಪ್ರದರ್ಶನಕ್ಕೆ ಕಿಮ್ ಇನ್ನು ಏನೇನು ಮಾಡುತ್ತಾಳೋ ಗೊತ್ತಿಲ್ಲ!

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ