ಕಲ್ಪನಾ ಚಾವ್ಲಾ ಜೀವನಗಾಥೆಯ ಚಿತ್ರದಲ್ಲಿ ಪ್ರಿಯಾಂಕಾ ಛೋಪ್ರಾ?

ಶುಕ್ರವಾರ, 1 ಜುಲೈ 2016 (15:55 IST)
ಚಿಕ್ಕ ವಯಸ್ಸಿಗೆ ವಿಶ್ವದಾದ್ಯಂತ ಹೆಸರು ಮಾಡಿ, ಮಿಂಚಿ ಮಾಯವಾದ ಭಾರತೀಯ ಮೂಲದ ಗಗನಯಾತ್ರಿ ಕಲ್ಪನಾ ಚಾವ್ಲಾ
ಜೀವನಗಾಥೆಯ ಚಿತ್ರವೊಂದು ತಯಾರಾಗುತ್ತಿದೆ. ಕಲ್ಪನಾ ಚಾವ್ಲಾ ಆತ್ಮಚರಿತ್ರೆ ಆಧಾರಿತ ಚಿತ್ರದಲ್ಲಿ ಪ್ರಿಯಾಂಕಾ ಛೋಪ್ರಾ ನಟಿಸಲಿದ್ದಾಳೆ ಎಂಬ ಸುದ್ದಿ ಕೇಳಿ ಬಂದಿದೆ. ಬಾಲಿವುಡ್ ಹಲವು ಚಿತ್ರಗಳಲ್ಲಿ ನಟಿಸಿರುವ ಅವರು, ಹಾಲಿವುಡ್‌ಗೂ ಎಂಟ್ರಿ ನೀಡಿ ಅಲ್ಲಿ ಕೂಡ ಛಾಪು ಮೂಡಿಸಿದ್ದಾರೆ.



ಆದ್ರೆ ಬಗ್ಗೆ ಪ್ರಿಯಾಂಕಾ ಛೋಪ್ರಾ ಅಲ್ಲಗಳೆದಿದ್ದಾರೆ. ಕ್ವಾಂಟಿಕೋ ಚಿತ್ರದ ಶೂಟಿಂಗ್ ಮುಗಿಯುವರೆಗೂ ನಾನು ಯಾವುದೇ ಹಿಂದಿ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ನಟಿ ಪ್ರಿಯಾಂಕಾ ಛೋಪ್ರಾ ತಿಳಿಸಿದ್ದಾಳೆ. 

ಚಿಕ್ಕ ವಯಸ್ಸಿಗೆ ವಿಶ್ವದಾದ್ಯಂತ ಹೆಸರು ಮಾಡಿ, ಮಿಂಚಿ ಮಾಯವಾದ ಕಲ್ಪನಾ ಚಾವ್ಲಾಳ ಚಿತ್ರದಲ್ಲಿ ಮಾಜಿ ಸುಂದರಿ ಪ್ರಿಯಾಂಕಾ ಈ ಚಿತ್ರದಲ್ಲಿ ಮಿಂಚಲಿದ್ದಾಳೆ ಎಂಬ ವದಂತಿಯು ಇದೆ. ಆದ್ರೆ ಪಿಗ್ಗಿ ಮಾತ್ರ ಮೌನ ಧರಿಸಿದ್ದಾಳೆ. ಅಡ್ಡಗೋಡೆಯ ಮೇಲೆ ದೀಪವಿಡುವಂತೆ ಮಾತನಾಡುತ್ತಿದ್ದಾಳೆ ಮೇರಿ ಕೋಂ ಖ್ಯಾತಿಯ ಪ್ರಿಯಾಂಕಾ ಛೋಪ್ರಾ. 
 
ಆದ್ರೆ ಕಲ್ಪನಾ ಚಾವ್ಲಾ ಆತ್ಮಚರಿತ್ರೆ ಚಿತ್ರದಲ್ಲಿ ನಟಿಸುತ್ತಿರುವುದರ ಬಗ್ಗೆ ಪಿಗ್ಗಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಈ ವಿಚಾರವನ್ನು ಅವರು ಸಿಕ್ರೇಟ್ ಆಗಿ ಇಟ್ಟಿದ್ದಾರಾ ಎಂದು ಹೇಳಲಾಗುತ್ತಿದೆ. 
 
ಮುಂಬೈನಲ್ಲಿ ನಾನು ವಾಸಿಸುತ್ತಿದ್ದೇನೆ. ನಾನು ಬಹಳಷ್ಟು ಚಿತ್ರ ನಿರ್ಮಾಪಕರನ್ನು ಭೇಟಿ ಮಾಡುವುದು ಬಾಕಿ ಇದೆ. ವರ್ಷದಲ್ಲಿ ನಾನು ನಾಲ್ಕು ಚಿತ್ರಗಳನ್ನು ಕೈಗೆತ್ತಿಕೊಳ್ಳಲು ಬಯಸುತ್ತೇನೆ. ಆದ್ದರಿಂದ ಮಾರ್ಚ್ ಮುನ್ನ ನಾನು ಯಾವುದೇ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲ್ಲ. ಅದಕ್ಕಾಗಿ ನಾನು ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಪ್ರಿಯಾಂಕಾ ಛೋಪ್ರಾ ತಿಳಿಸಿದ್ದಾಳೆ. 
 
2003ರಲ್ಲಿ ಏಳು ಜನ ಗಗನ ಯಾತ್ರಿಗಳ ಜತೆ ತಾನು ಒಬ್ಬಳಾಗಿ ಆಕಾಶಕ್ಕೆ ಹಾರಿದ ಭಾರತ-ಅಮೆರಿಕಾ ಮಿಶ್ರ ತಳಿಯ ಧೀರ ಮಹಿಳೆ ಕಲ್ಪನಾ ಚಾವ್ಲಾ ಅಂದು ಮೇಲೆ ಹಾರಿದವಳು ಕೆಳಗೆ ಇಳಿಯಲೇ ಇಲ್ಲ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ