ದೀಪಿಕಾ ಪಡುಕೋಣೆ ಜತೆಗೆ ಶಾಹಿದ್ ಕಪೂರ್ ರೋಮ್ಯಾನ್ಸ್?

ಬುಧವಾರ, 20 ಜುಲೈ 2016 (13:07 IST)
ದೀಪಿಕಾ ನಟಿಯಾಗಿ ಅಭಿನಯಿಸುತ್ತಿರುವ 'ಪದ್ಮಾವತಿ' ಚಿತ್ರದಲ್ಲಿ ದೀಪಿಕಾ ಪಡುಕೋಣೆ ಜತೆಗೆ ನಟ ಶಾಹಿದ್ ಕಪೂರ್ ರೋಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಹಾಗೂ ರಣಬೀರ್ ಸಿಂಗ್ ಮಿಂಚಲಿದ್ದಾರೆ. ಪದ್ಮಾವತಿಯ ಪತಿಯಾಗಿ ಶಾಹಿದ್ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. 

 
ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಶಾಹಿದ್ ಅವರನ್ನು ಈ ಚಿತ್ರದಲ್ಲಿ ಚಿತ್ತೋರ್ ರಾಜನ ಪಾತ್ರದಲ್ಲಿ ತೆರೆಗೆ ತರಲು ಬಯಸಿದ್ದಾರಂತೆ. ರಾಣಿ ಪದ್ಮಾವತಿಯನ್ನು ಚಿತ್ತೋರ್ ರಾಜ ಮದುವೆಯಾಗಿರುತ್ತಾನೆ. 
 
ಮೂಲಗಳ ಪ್ರಕಾರ ಶಾಹಿದ್ ಚಿತ್ರದ ಆಫರ್‌ಗೆ ಒಪ್ಪಿಗೆ ನೀಡುತ್ತಾರೆಯೇ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಒಂದು ವೇಳೆ ಚಿತ್ರಕ್ಕೆ ಶಾಹಿದ್ ಯೆಸ್ ಅಂದ್ರೆ ಮೊದಲ ಬಾರಿಗೆ ಬನ್ಸಾಲಿ ಜತೆಗೆ ಕೆಲಸ ಮಾಡಲಿದ್ದಾರೆ. ಇನ್ನೂ ವಿಶೇಷ ಎಂದ್ರೆ ಪದ್ಮಾವತಿ ಹಾಗೂ ರಣಬೀರ್ ಜತೆಗೆ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ. 
 
ಕೆಲ ಮೂಲಗಳ ಪ್ರಕಾರ ಶಾಹಿದ್‌ಗೆ ರೋಲ್ ಇಷ್ಟವಾಗಿದೆಯಂತೆ. ಶೀಘ್ರದಲ್ಲೇ ಪಾತ್ರಕ್ಕೆ ಸಹಿ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಅಧಿಕೃತವಾಗಿ ಶಾಹಿದ್ ಕಪೂರ್ ಅಭಿನಯಿಸುತ್ತಿರುವ ಬಗ್ಗೆ ತಿಳಿದು ಬಂದಿಲ್ಲ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

ವೆಬ್ದುನಿಯಾವನ್ನು ಓದಿ