ಮಹಿಳಾ ಸಬಲೀಕರಣ ಕೇವಲ ಒಂದು ದೇಶದ ಸಂಗತಿಯಲ್ಲ - ಶಬಾನಾ ಅಜ್ಮಿ

ಸೋಮವಾರ, 20 ಏಪ್ರಿಲ್ 2015 (10:37 IST)
ಮಹಿಳಾ ಹಕ್ಕುಗಳ ಬಗ್ಗೆ ದೇಶವಿಡಿ ಸಾಕಷ್ಟು ಚರ್ಚೆ ನಡೆಯುತ್ತಲೇ ಇರುತ್ತದೆ. ಇದು ಕೇವಲ ದೇಶಕ್ಕೆ ಸಂಬಂಧಪಟ್ಟ ಸಂಗತಿಯಲ್ಲ ಇಡೀ ವಿಶ್ವದ ಸಂಗತಿ. ಈ ಅಂಶಕ್ಕೆ ಸಂಬಂಧಪಟ್ಟಂತೆ ದೀಪಿಕಾ ಪಡುಕೋಣೆ ಮೈ ಚಾಯ್ಸ್ ಹೆಚ್ಚು ಗಮನ ಸೆಳೆದಿತ್ತು.ಆಕೆಯ ಬಗ್ಗೆ ಪ್ರಶಂಸೆ, ಟೀಕೆ ಎಲ್ಲವೂ ಹರಿದು ಬಂದಿತ್ತು. 

ಈಗ ಆ ಪಟ್ಟಿಗೆ ಬಾಲಿವುಡ್ ಪ್ರಸಿದ್ಧ ನಟಿ ಶಬನಾ ಅಜ್ಮಿ ಸೇರ್ಪಡೆ ಆಗುತ್ತಿದ್ದಾರೆ. ಮಹಿಳಾ ಸಬಲೀಕರಣದ ಬಗ್ಗೆ ಕ್ರಿಯೇಟಿವ್ ಸರ್ವಿಸ್ ಗ್ರೂಪ್ ಎನ್ನುವ ಸಂಸ್ಥೆ ತಯಾರಿಸುತ್ತಿರುವ ಡಾಕ್ಯುಮೆಂಟರಿಯಲ್ಲಿ ಶಬಾನಾ ಅವರು ಅಭಿನಯಿಸುತ್ತಿದ್ದಾರೆ. ಕೆಲವು ಮಹಿಳೆಯರು ಪತ್ರದ ಮುಖೇನ ತಿಳಿಸಿದ ಅನೇಕ ಸಮಸ್ಯೆಗಳನ್ನು ಈ ಡಾಕ್ಯುಮೆಂಟರಿ  ಮೂಲಕ  ಬೆಳಕು ಚೆಲ್ಲುತ್ತಿದ್ದಾರೆ. 
 
ಈ ಸಮಸ್ಯೆಗಳನ್ನು ಪ್ರಸಿದ್ಧ ನಟಿಮಣಿಯರ ಮೂಲಕ ಹೇಳಿಸುತ್ತಿದ್ದಾರೆ. ಈಗ ನಾಯಕಿಯರಾದ ಅದಿತಿ ರಾವ್, ದಿಯಾ ಮಿರ್ಜಾ ಕೆಲವು ಸಮಸ್ಯೆಗಳ ಬಗ್ಗೆ ಹೇಳಿದ್ದಾರೆ. ಅದೇ ರೀತಿ ಅಮೆರಿಕಕ್ಕೆ ಸೇರಿದ ಪ್ರಸಿದ್ಧ ಸ್ತ್ರೀವಾದದ ಬರಹಗಾರ್ತಿಯಾದ ಮಾಯಾ ಅಂಗೆಲೌ  ಅವರು ಬರೆದ ಅಂಡ್ ಸ್ಟೀಲ್ ಐರೆಜ್ ಎನ್ನುವ ಕವಿತೆಯ ಪ್ರಸಿದ್ಧ ಸಾಲುಗಳನ್ನು ಶಬಾನ ನಿರರ್ಗಳವಾಗಿ ಈ ಡಾಕ್ಯುಮೆಂಟರಿ ಮೂಲಕ ಹೇಳುತ್ತಿದ್ದಾರೆ. 
 
ಮಹಿಳೆಯ ಸಬಲೀಕರಣ ಎನ್ನುವುದು ಯೂನಿವರ್ಸಲ್ ಕಾನ್ಸೆಪ್ಟ್. ಈ ಸಮಸ್ಯೆ ಯಾರಿಗೆ ಬೇಕಾದರೂ ಉಂಟಾಗಿರಬಹುದು. ಮಹಿಳೆಯರು ಎಲ್ಲಾ ದೇಶಗಳಲ್ಲೂ ಎದುರಿಸುತ್ತಿರುವ ಸಮಸ್ಯೆಗಳನ್ನು ವಿಶ್ವಕ್ಕೆ ತೋರಿಸುವ ವೀಡಿಯೋ ಇದಾಗಿದೆ.ಮಾಯಾ ಅಂಗೆಲೌ ಬರೆದ ಕೆಲವು ಸಾಲುಗಳು ಮನಸ್ಪರ್ಶಿಯಾಗಿದೆ ಎಂದು ಹೇಳಿದ್ದಾರೆ ಶಬಾನಾ.
 
ಬಹಳ ಸಮಯದಿಂದ ಮಹಿಳೆಯರು ತಮ್ಮ ಹಕ್ಕುಗಳಿಂದ ದೂರವಾಗಿದ್ದೆ. ಯಾವುದೇ ಆಗಿರಲಿ ಸ್ವಲ್ಪ ಗಟ್ಟಿಯಾಗಿ ಕೇಳಿದಾಗ ಮಾತ್ರ  ಸ್ತ್ರೀ ಸಮಾನತೆ, ಸ್ವಾತಂತ್ರದ ಬಗ್ಗೆ ಚರ್ಚೆಗಳು ನಡೆಯುತ್ತವೆ ಹಾಗೂ ಸ್ತ್ರೀ ಪುರುಷರ ನಡುವೆ ಸಮಾನತೆ ಏರ್ಪಡುತ್ತದೆನ್ನುವ ಮಾತನ್ನು ಸಹಿತ ಶಬಾನ ಮೇಡಂ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ