ನಿನ್ನ ನೆನಪು ಸದಾ ಹಸಿರಾಗಿರುತ್ತದೆ .. ಹ್ಯಾಪಿ ಬರ್ತ್ ಡೇ !

ಬುಧವಾರ, 27 ಆಗಸ್ಟ್ 2014 (11:16 IST)
ಬಾಲಿವುಡ್  ಚಿತ್ರರಂಗದಲ್ಲಿ ತನ್ನ ರೂಪ, ಅಸಮಾನ್ಯ ಪ್ರತಿಭೆಯಿಂದ ಎಲ್ಲರ ಗಮನ ಸೆಳೆದ ನಟಿ ಪ್ರಿಯಾಂಕ ಚೋಪ್ರ. ಮಿಸ್ ವಲ್ಡ್ ಆದ ಬಳಿಕ ತನ್ನ ಗಮನವನ್ನು ಬಾಲಿವುಡ್ ಚಿತ್ರಗಳಲ್ಲಿ ನಟಿಸುವತ್ತ ಕೇಂದ್ರೀಕರಿಸಿದ ಈ ಸುಂದರಿ, ಅಲ್ಲಿ ಯಶಸ್ವಿ ತಾರೆಯಾಗಿ ನಂಬರ್ ಒನ್ ನಾಯಕಿಯರ ಪಟ್ಟಿಯಲ್ಲಿ ತನ್ನ ಸ್ಥಾನ ಗಳಿಸಿಕೊಂಡಳು. 

ಈ ಮುಖಾಂತರ ಆಕೆ ಚಿತ್ರಜಗತ್ತಿನಲ್ಲಿ ತನ್ನ ಸ್ಥಾನ ಗಟ್ಟಿ ಮಾಡಿಕೊಂಡಳು. ಆದರೂ ಸಹಿತ ಆಕೆಯ ವೈಯಕ್ತಿಕ ಬದುಕಲ್ಲಿ ಹೇಳಿಕೊಳ್ಳುವ ನೆಮ್ಮದಿ ಇಲ್ಲ. ಅದಕ್ಕೆ ಕಾರಣ ಅವರ ತಂದೆಯ ಮರಣ. ಪಿಗ್ಗಿ ಚಾಪ್ಸ್ ಅಪ್ಪ ಅಶೋಕ್ ಚೋಪ್ರ ಸಾವು.  ಸೈನ್ಯದಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ನಿವೃತ್ತಿ ಹೊಂದಿದ್ದ  ಅಶೋಕ್ ಅವರು ಕಳೆದ ವರ್ಷ ಅವರು ಕ್ಯಾನ್ಸರ್ ಕಾಯಿಲೆಯ ಕಾರಣದಿಂದ ಮರಣ ಅಪ್ಪಿದ್ದರು. ಅವರ ಹುಟ್ಟುಹಬ್ಬ ಇತ್ತೀಚಿಗೆ ನಡೆಯಿತು.
 
ಕಳೆದ ಶನಿವಾರ ನಡೆದ ಈ ಹುಟ್ಟು ಹಬ್ಬ  ಸಮಯದಲ್ಲಿ ಪಿಗ್ಗಿ ಚಾಪ್ಸ್ ತನ್ನ ತಂದೆಯ ನೆನಪಲ್ಲಿ ಸಾಕಷ್ಟು ಚಂದ ನೀಡಿದ್ದಾರೆ. ಕೆಲವು ಬಾರಿ ಹೆಚ್ಚು ಮಾತನಾಡುತ್ತೇನೆ. ಆದರೆ ಇಂದು ಕೇವಲ ಮೌನಕ್ಕೆ ಆದ್ಯತೆ .. ಅಪ್ಪ ಇಂದು ನಿನ್ನದೇ ನೆನಪು ಇಡೀ ದಿನ, ಪ್ರತಿಯೊಂದು ಸಂಗತಿಗಳನ್ನು ನೆನಪಿಸಿಕೊಂಡು ಇದ್ದೇನೆ. ಹ್ಯಾಪಿ ಬರ್ತ್ ಡೇ ಅಪ್ಪ   ಎಂದು ಅಂದು ಆಕೆ ಟ್ವೀಟ್ ಮಾಡಿ ತನ್ನ ಮನದ ಭಾವನೆಗಳನ್ನು ಬಿಚ್ಚಿಟ್ಟಳು. ಏನೇ ಇದ್ದರು ಅಪ್ಪ -ಅಮ್ಮ ಇಲ್ಲ ಬದುಕು ಎಷ್ಟು ನೋವಿನಿಂದ ಕೂಡಿದ್ದು ಎನ್ನುವುದನ್ನು ಯಾರೂ ಮರೆಯ  ಬಾರದು !!

ವೆಬ್ದುನಿಯಾವನ್ನು ಓದಿ