ನಟಿ ಅನುಷ್ಕ ಶರ್ಮಾ

ಆದಿತ್ಯ ಚೋಪ್ರಾ ನಿರ್ದೇಶನದ ಯಶ್‌ರಾಜ್ ಫಿಲ್ಮ್‌ಸ್ ನಿರ್ಮಾಣದ ರಬ್ ನೇ ಬನಾ ದಿ ಜೋಡಿ ಚಿತ್ರಕ್ಕಾಗಿ ಬೆಂಗಳೂರು ಮೂಲದ ಯಶಸ್ವಿ ಮಾಡೆಲ್ ಅನುಷ್ಕಾ ಶರ್ಮಾ ಅವರು ಆಯ್ಕೆಯಾಗಿದ್ದಾರೆ.

18 ರ ಹರೆಯದ ಅನುಷ್ಕ ಎಕನಾಮಿಕ್ಸ್ ವಿಭಾಗದಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ತಮ್ಮ ಅನುಪಮ ಸೌಂದರ್ಯದ ಮೂಲಕ ವೆಂಡೆಲ್ ರಾಡ್ರಿಕ್ಸ್ ಅವರ ಲಕ್ಮೆ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಿದ ನಂತರ ಸಿಲ್ಕ್‌ ಆಂಡ್ ಶೈನ್ ವಿಸ್ಪರ್ ಮತ್ತು ಫಿಯೆಟ್ ಪಾಲಿಯಾ ಪ್ರಚಾರ ಜಾಹೀರಾತುಗಳಲ್ಲಿ ಮಿಂಚಿದರು.

ಮಾಡೆಲಿಂಗ್‌ನಲ್ಲಿ ಸತತ ಯಶಸ್ಸು ಕಂಡ ಅನುಷ್ಕ ಇತ್ತೀಚಿನ ಬೆಳವಣಿಗೆಗೆಳಲ್ಲಿ ಬಾಲಿವುಡ್ ಬಾದಶಾಹ್ ಎಂದು ಕರೆಯಲಾಗುವ ಶಾರೂಕ್ ಖಾನ್ ಅವರೊಂದಿಗೆ ಅಭಿನಯಿಸುವ ಅವಕಾಶ ಪಡೆದಿರುವುದು ಅನುಷ್ಕಾಗೆ ಅದೃಷ್ಟ ತಂದಿದೆ. ಇದರಿಂದಾಗಿ ಒಂ ಶಾಂತಿ ಒಂ ಚಿತ್ರದ ನಾಯಕಿ ಬೆಂಗಳೂರು ಮೂಲದ ದೀಪಿಕಾ ಪಡುಕೋಣೆಯ ನಂತರದ ಸ್ಥಾನ ಪಡೆದ ಖ್ಯಾತಿ ಅನುಷ್ಕಾ ಶರ್ಮಾ ಪಡೆದಿದ್ದಾರೆ. ಅನುಷ್ಕಾಳಲ್ಲಿರುವ ಸುಪ್ತ ಪ್ರತಿಭೆ ಹಾಗೂ ಮಾದಕ ಚೆಲುವು ಆದಿತ್ಯ ಅವರನ್ನು ಸೆಳೆದಿದ್ದರಿಂದ ಅನುಷ್ಕಾಳನ್ನು ಮುಂದಿನ ಚಿತ್ರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಬೆಂಗಳೂರು ಮೂಲಗಳು ತಿಳಿಸಿವೆ.

ಬೆಂಗಳೂರಿನ ಫ್ಯಾಷನ್ ಉದ್ಯಮದ ಪ್ರಕಾರ ಅನುಷ್ಕ ಬೆಂಗಳೂರಿನಿಂದ ಮುಂಬೈಗೆ ಮಾಡೆಲಿಂಗ್ ಭವಿಷ್ಯವನ್ನು ಅರಸುವ ಪ್ರಯತ್ನದಲ್ಲಿದ್ದರು. ಬಾಲಿವುಡ್ ಬಗ್ಗೆ ಆಸಕ್ತಿ ಇರಲಿಲ್ಲ. ಆದರೆ ಉತ್ತಮ ಬ್ಯಾನರ್‌ ದೊರೆತಲ್ಲಿ ಮಾತ್ರ ನಟಿಸುತ್ತೇನೆ. ನಾನು ಮಾಡೆಲಿಂಗ್‌ನಲ್ಲಿ ಸಂಥೋಷವಾಗಿದ್ದೇನೆ. ಇತರ ಕ್ಷೇತ್ರಗಳ ಬಗ್ಗೆ ಆಸಕ್ತಿಯನ್ನು ಹೊಂದಿರಲಿಲ್ಲ. ನಾನು ಮಾಡೆಲ್ ಆಗಿ ಉಳಿಯಲು ಇಚ್ಚಿಸುತ್ತೇನೆ ಎಂದು ತನ್ನ ಸಹದ್ಯೋಗಿಗಳಿಗೆ ಅನುಷ್ಕ ಹೇಳುತ್ತಿದ್ದರು ಎಂದು ತಿಳಿಸಿವೆ.

ವೆಂಡೆಲ್ ರಾಡ್ರಿಕ್ಸ್ ಅವರ ಸ್ಪ್ರಿಂಗ್ ಸಮರ್‌ 07 ಕಲೆಕ್ಷನ್‌ನಲ್ಲಿ ಭಾಗವಹಿಸಿ ಮೊದಲ ಸ್ಥಾನವನ್ನು ಪಡೆದ ಅನುಷ್ಕ, ಕೇಶ ಸೌಂದರ್ಯ ಜಾಹೀರಾತುಗಳಲ್ಲಿ ಜಾಹೀರಾತುಗಳಲ್ಲಿ ಮಿಂಚಿದರೂ ಫಿಯೆಟ್ ಪಾಲಿಯೊ,ಮೇರಿ ಸಪನೋಂಕಿ ರಾಣಿ ಜಾಹೀರಾತನ್ನು ಮರೆತಿಲ್ಲ.

ವೆಬ್ದುನಿಯಾವನ್ನು ಓದಿ