ನೆಹಾ ದೂಫಿಯಾ

ಭಾರತೀಯ ನೌಕಾ ಪಡೆಯ ಕಮಾಂಡರ್ ಪ್ರದೀಪ್ ದೂಫಿಯಾ ಮತ್ತು ಮಾಂಪಿಧರ್ ದಂಪಿತಿಯ ಮಗಳಾಗಿ 1980ನೇ ಇಸವಿಯ ಆಗಸ್ಟ್ 27ರಂದು ಕೊಚ್ಚಿಯಲ್ಲಿ ನೆಹಾ ದೂಫಿಯಾ ಜನಿಸಿದಳು. ಮಿಸ್ ಇಂಡಿಯಾ-2002 ಪ್ರಶಸ್ತಿ ಮುಡಿಗೇರಿಸಿಕೊಂಡ ನೆಹಾ 2003ರಲ್ಲಿ 'ಕಾಯಮತ್' ಚಿತ್ರದ ಮ‌ೂಲಕ ಚಿತ್ರರಂಗಕ್ಕೆ ಪ್ರವೇಶಿಸಿದಳು. ಪ್ರಥಮ ಚಿತ್ರವೇ ಭರ್ಜರಿ ಗಳಕೆಯನ್ನು ಪಡೆಯಿತು. ನೆಹಾ ನಟನೆಯ ಎರಡನೇ ಚಿತ್ರ 'ಜೂಲಿ'. ಇದರಲ್ಲಿ ವೇಶ್ಯೆಯ ಪಾತ್ರದಲ್ಲಿ ನಟಿಸಿದಳು. ಅದರ ನಂತರ 2005ರಲ್ಲಿ 'ಶಿಶಾ' ಚಿತ್ರ ಫ್ಲಾಪ್ ಆಯಿತು. ನಂತರ 'ಕ್ಯಾ ಕೂಲ್ ಹೆ ಹಮ್ ಹಿಟ್' ,'ಶೂಟೌಟ್', 'ದಸ್ ಕಹಾನಿಯಾ' ಭಾರೀ ಯಶಸ್ಸು ಕಾಣಲಿಲ್ಲ. ಮನರಾಂಜನಾತ್ಮಕ ಚಿತ್ರಗಳಾದ 'ಚುಪ್ ಚುಪ್ ಕೆ', 'ಇಕ್ ಚಾಲಿಸ್ ಕಿ ಲಾಸ್ಟ್ ಲೋಕಲ್', 'ಮಿಥ್ಯಾ', 'ಮಹಾರತಿ', 'ಸಿಂಗ್ ಈಸ್ ಕಿಂಗ್' ಬಾಲಿವುಡ್ ನಿರ್ಮಾಪಕರ ಬೊಕ್ಕಸ ತುಂಬಿಸಿತು. 2009 ವರ್ಷ ನೆಹಾಳ ಕೈಯಲ್ಲಿ 'ಪೇಯಿಂಗ್ ಗೆಸ್ಟ್', 'ಪಪ್ಪು ಕಾಂಟ್ ಡ್ಯಾನ್ಸ್ ಸಾಲ', 'ರಫ್ಟಾರ್', 'ರಾತ್ ಗಯಿ ಬಾತ್', 'ಐ ಆಮ್' 24 ಮತ್ತು 'ದೆ ಧನಾಧನ್' ಚಿತ್ರಗಳಿವೆ.

ವೆಬ್ದುನಿಯಾವನ್ನು ಓದಿ