ಬಜೆಟ್ ನಲ್ಲಿ ಅರುಣ್ ಜೇಟ್ಲಿಯಿಂದ ರೈತರಿಗೆ ಬಂಪರ್ ಕೊಡುಗೆ

ಗುರುವಾರ, 1 ಫೆಬ್ರವರಿ 2018 (11:30 IST)
ನವದೆಹಲಿ: ಇದುವರೆಗೆ ಉದ್ದಿಮೆದಾರರ ಪರ ಎಂದೇ ಬಿಂಬಿತವಾಗಿದ್ದ ಕೇಂದ್ರದ ಮೋದಿ ಸರ್ಕಾರವನ್ನು ರೈತರ ಪರ ಎಂದು ಬದಲಾಯಿಸಲು ಈ ಬಜೆಟ್ ನಲ್ಲಿ ವಿತ್ತ ಸಚಿವರು ಪ್ರಯತ್ನಪಟ್ಟಿದ್ದಾರೆ.
 

ರೈತರ ಕಲ್ಯಾಣವೇ ನಮ್ಮ ಗುರಿ ಎಂದು ಆರಂಭದಲ್ಲಿಯೇ ವಿತ್ತ ಸಚಿವರು ಘೋಷಿಸಿದ್ದಾರೆ. ರೈತರ ಬೆಳೆಗಳಿಗೆ ಉತ್ತಮ ಬೆಲೆ, ರೈತರ ಆದಾಯ ಹೆಚ್ಚಿಸುವ ಯೋಜನೆಗಳಿಗೆ ಚಾಲನೆ ನೀಡುವುದಾಗಿ ಹೇಳಿದ್ದಾರೆ.

ರಾಜ್ಯ ಸರ್ಕಾರಗಳ ಸಹಯೋದೊಂದಿಗೆ ರೈತರ ಕಲ್ಯಾಣ ಯೋಜನೆಗಳು, ಎಪಿಎಂಸಿ ಮಾರುಕಟ್ಟೆಗಳ ಡಿಜಿಟಲೀಕರಣ, ಸಾವಯವ ಕೃಷಿಗೆ ಉತ್ತೇಜನ, ಕೃಷಿ ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ ನೀಡುವುದು ನಮ್ಮ ಗುರಿಯಾಗಲಿದೆ ಎಂದು ಅರುಣ್ ಜೇಟ್ಲಿ ಘೋಷಿಸಿದ್ದಾರೆ. ಕೃಷಿ ಮಾರುಕಟ್ಟೆಗಳ ಮೂಲಸೌಕರ್ಯಾಭಿವೃದ್ಧಿಗೆ 2 ಸಾವಿರ ಕೋಟಿ ರೂ. ನೀಡಲಾಗಿದೆ.

ಬೆಳೆದ ಜಾಗಕ್ಕೆ ಮಾರುಕಟ್ಟೆ ತಲುಪಿಸುವುದು, ರೈತರು ಬೆಳೆದ ಉತ್ಪನ್ನಗಳ ಸಂಸ್ಕರಣೆಗೆ ಯೋಜನೆ, ಒದಗಿಸುವುದು, ಆಹಾರ ಸಂಸ್ಕರಣೆಗಾಗಿ ಕೃಷಿ ಸಂಪದ ಯೋಜನೆ, ಆಪರೇಷನ್ ಗ್ರೀನ್ ಹೆಸರಿನಲ್ಲಿ 500 ಕೋಟಿ ರೂ. ನಿಧಿ, ಬೆಂಬಲ ಬೆಲೆ ನೇರವಾಗಿ ರೈತರಿಗೆ ತಲುಪಲು ಯೋಜನೆ, ಮೀನುಗಾರಿಕೆ, ಪಶು ಸಂಗೋಪನೆ ವಲಯದವರಿಗೂ ಕೃಷಿ ಕಾರ್ಡ್ ವಿತರಣೆ, 52 ಮೆಗಾಫುಡ್ ಪಾರ್ಕ್ ಸ್ಥಾಪನೆ ಮುಂತಾದ ಹೊಸ ಕೊಡುಗೆಗಳನ್ನು ಈ ಬಾರಿಯ ಬಜೆಟ್ ನಲ್ಲಿ ಕೃಷಿ ವಲಯಕ್ಕೆ ನೀಡಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ