Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

Sampriya

ಬುಧವಾರ, 16 ಏಪ್ರಿಲ್ 2025 (12:31 IST)
Photo Credit X
ಬೆಂಗಳೂರು: ಬೆಟ್ಟಿಂಗ್ ಆ್ಯಪ್ ಸಂಬಂಧ ಈಚೆಗೆ ವಿಚಾರಣೆ ಎದುರಿಸಿದ್ದ ಬಿಗ್‌ಬಾಸ್ ಸ್ಪರ್ಧಿ, ರೀಲ್ಸ್‌ ಸ್ಟಾರ್‌ ಸೋನು ಶ್ರೀನಿವಾಸ್ ಗೌಡ ಸೇರಿದಂತೆ ಹಲವರು ಇದೀಗ ಕ್ಷಮೆಯಾಚನೆ ಮಾಡಿದ್ದಾರೆ.

ಮಾನ್ಯತೆಯಲ್ಲದ ಬೆಟ್ಟಿಂಗ್ ಆ್ಯಪ್ ಪ್ರಮೋಷನ್ ಮಾಡಿದ ಆರೋಪದಲ್ಲಿ ಸೋನು ಗೌಡ ಅವರು ರೀಲ್ಸ್ ಮಾಡಿ, ಇನ್ಮುಂದೆ ಈ ಸಂಬಂಧದ ವಿಡಿಯೋಗಳನ್ನು ಮಾಡುವುದಿಲ್ಲ ಎಂದು ಕ್ಷಮೆಯಾಚನೆ ಮಾಡಿದ್ದಾರೆ.

ಬೆಟ್ಟಿಂಗ್ ಆ್ಯಪ್ ಬಗ್ಗೆ ಪ್ರಮೋಟ್ ಮಾಡುತ್ತಿದ್ದ ಅಕೌಂಟ್‌ನಲ್ಲೆ ಇದೀಗ ಕ್ಷಮೆಯಾಚನೆ ಮಾಡಿದ್ದಾರೆ. ನಾವು ಬೆಟ್ಟಿಂಗ್ ಪ್ರಮೋಷನ್ ಮಾಡುವುದರಿಂದ ಜನರ ಲಕ್ಷಾಂತರ ರೂಪಾಯಿ ಹಾಕಿ ಬೀದಿಗೆ ಬರ್ತಾರೆ. ಹಾಗಾಗಿ ಐಪಿಎಲ್ ಬೆಟ್ಟಿಂಗ್ ಬಗ್ಗೆ ಯಾರೇಲ್ಲ ಪ್ರಮೋಷನ್ ಮಾಡ್ತಾ ಇದ್ದಿರಾ ಅವರೇಲ್ಲರು ಕೂಡ ದಯವಿಟ್ಟು ಸ್ಟಾಪ್ ಮಾಡಿ ಅಂತಲೂ ಮನವಿ ಮಾಡಿಕೊಂಡಿದ್ದಾರೆ.

ಇತ್ತೀಚೆಗಷ್ಟೇ 100ಕ್ಕೂ ಅಧಿಕ ರೀಲ್ಸ್ ಸ್ಟಾರ್‌ಗಳು ಬೆಂಗಳೂರು ಸೈಬರ್ ಕ್ರೈಂ ಪೊಲೀಸರ ತನಿಖೆ ಎದುರಿಸಿದ್ದರು. ಐಪಿಎಲ್ ಬೆಟ್ಟಿಂಗ್ ಆಪ್‌ಗಳ ಬಗ್ಗೆ ಪ್ರಮೋಷನ್ ಮಾಡಿದ್ದ ಕಾರಣ ಸುಮಾರು 50ಕ್ಕೂ ಹೆಚ್ಚು ಸ್ಟಾರ್‌ಗಳಿಗೆ ಸೈಬರ್ ಕ್ರೈಂ ಪೊಲೀಸರು ನೋಟಿಸ್ ಕೊಟ್ಟು ವಿಚಾರಣೆ ಎದುರಿಸಿದ್ದರು.

ಅದಲ್ಲದೆ ಇನ್ಮುಂದೆ ಬೆಟ್ಟಿಂಗ್ ಆಪ್‌ಗಳ ಬಗ್ಗೆ ಪ್ರಮೋಟ್ ಮಾಡಿದರೆ ಅಂತವರ ವಿರುದ್ಧ ಪ್ರಕರಣ ದಾಖಲಿಸಿ, ಜೈಲಿಗೆ ಹಾಕುವ ಎಚ್ಚರಿಕೆಯನ್ನು ನೀಡಿದ್ದರು.  ಹಾಗಾಗಿ ಬೆಟ್ಟಿಂಗ್ ಆಪ್‌ಗಳ ಬಗ್ಗೆ ಪ್ರಮೋಟ್ ಮಾಡಿದ್ದ ವಿಡಿಯೋಗಳನ್ನ ಡಿಲೀಟ್ ಮಾಡಿ ಅವರದ್ದೇ ಅಕೌಂಟ್‌ಗಳಲ್ಲಿ ಅಪಾಲಜಿ ಮಾಡಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ