ಬಜೆಟ್ 2018: ಪ್ರಧಾನಿ ಮೋದಿ ಕೊಡ್ತಾರಾ ಚುನಾವಣಾ ಬಜೆಟ್?

ಸೋಮವಾರ, 29 ಜನವರಿ 2018 (12:32 IST)
ನವದೆಹಲಿ: ಲೋಕಸಭೆ ಚುನಾವಣೆ ಮುಂದಿನ ವರ್ಷ ನಡೆಯಲಿರುವ ಹಿನ್ನಲೆಯಲ್ಲಿ ಈ ಬಾರಿಯ ಬಜೆಟ್ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.
 

ಇಂದಿನಿಂದ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಈ ಸಾಲಿನ ಬಜೆಟ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನಪ್ರಿಯ ಬಜೆಟ್ ಆಗಬಹುದೆಂದು ಲೆಕ್ಕಾಚಾರ ಹಾಕಲಾಗಿದೆ.

ಚುನಾವಣೆ ಗಮನದಲ್ಲಿಟ್ಟುಕೊಂಡು ಪ್ರಧಾನಿ ಮೋದಿ ಗ್ರಾಮೀಣಾಭಿವೃದ್ಧಿ, ನಿರುದ್ಯೋಗಿಳಿಗೆ ಬಂಪರ್ ಕೊಡುಗೆ ನೀಡಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ರಾಷ್ಟ್ರತಿಗಳೂ ಅಧಿವೇಶನಕ್ಕೆ ಮೊದಲು ನಡೆಸಿದ ಭಾಷಣದಲ್ಲಿ ಇದು ರೈತರ ಶ್ರೇಯೋಭಿವೃದ್ಧಿಗೆ ಮೀಸಲಾಗುವ ಬಜೆಟ್ ಆಗಲಿದೆ ಎಂದಿದ್ದಾರೆ. ಆ ಮೂಲಕ ಇದುವರೆಗೆ ಮೋದಿ ಸರ್ಕಾರ ಅಷ್ಟೊಂದು ಗಮನ ಕೊಡದ ಕೃಷಿ ಕ್ಷೇತ್ರದ ಬಗ್ಗೆ ಹೆಚ್ಚಿನ ಒಲವು ತೋರಬಹುದು. ಆ ಮೂಲಕ ಆ ವರ್ಗದ ಜನರ ಸೆಳೆಯುವ ಪ್ರಯತ್ನ ನಡೆಸಬಹುದು ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ