ಕಾಂಗ್ರೆಸ್ ಧುರೀಣೆ ಸೋನಿಯಾ ಗಾಂಧಿಯ ಭವಿಷ್ಯ!

ಭಾರತಿ ಪಂಡಿತ್

 
PTI
ದೇಶದ ಬಹುದೊಡ್ಡ ರಾಜಕೀಯ ಪಕ್ಷವಾದ ಕಾಂಗ್ರೆಸ್‌ನ ಅಧ್ಯಕ್ಷೆ ಸೋನಿಯಾ ಗಾಂಧಿ 1946ರ ಡಿಸೆಂಬರ್ 9ರಂದು ಇಟಲಿಯಲ್ಲಿ ಜನಿಸಿದರು. ಸೋನಿಯಾ ಗಾಂಧಿ ಅವರದ್ದು ಕರ್ಕ ಲಗ್ನವೂ, ಮಿಥುನ ರಾಶಿಯೂ ಆಗಿರುತ್ತದೆ. ಕುಂಡಲಿಯ ಲಗ್ನದಲ್ಲಿ ಶನಿ ವಿರಾಜಮಾನನಾಗಿದ್ದಾನೆ. ಇಂಥ ಶನಿಯ ಸ್ಥಾನ ಯಾವಾಗಲೂ ತುಂಬ ಕಷ್ಟಗಳ ನಂತರ ಸಫಲತೆಯನ್ನೂ, ಪ್ರಸಿದ್ಧಿಯನ್ನೂ ನೀಡುತ್ತಾನೆ. ಇಂತಹ ಸ್ಥಿತಿಯಲ್ಲಿ ಶನಿ ಇದ್ದರೆ ಆ ವ್ಯಕ್ತಿ ಸ್ವಲ್ಪ ಸ್ವಾರ್ಥಿಯೂ ಆಗಿರುತ್ತಾರೆ.

ಚತುರ್ಥ ಸ್ಥಾನದಲ್ಲಿ ಗುರು-ಶುಕ್ರರ ಮಿಲನವಾಗಿದೆ. ಇದರಿಂದಾಗಿ ದಾರ್ಶನಿಕ ವಿಚಾರವಾದ, ದೂರದೃಷ್ಠಿ ಹಾಗೂ ಯೋಚನೆ ಮಾಡುವ ಶಕ್ತಿ ಒದಗಿರುವುದರಲ್ಲಿ ಸಂದೇಹವೇ ಇಲ್ಲ. ಬೇಕಾದಷ್ಟು ಧನಸಂಪತ್ತು ಹಾಗೂ ಜನಮನ್ನಣೆಯೂ ದಕ್ಕುತ್ತದೆ. ಇಂತಹ ಗುರು-ಶುಕ್ರರ ಮಿಲನ ಖಂಡಿತವಾಗಿಯೂ ಆ ವ್ಯಕ್ತಿಯಲ್ಲಿ ಪ್ರತ್ಯಕ್ಷವಾಗಿಯಲ್ಲದಿದ್ದರೂ ಪರೋಕ್ಷವಾಗಿಯಾದರೂ ಇತರರಿಗೆ ಸಹಾಯ ಮಾಡುವ ಸಂದರ್ಭಗಳೇ ಬರುತ್ತವೆ. ಪಂಚಮ ಸ್ಥಾನದಲ್ಲಿ ಕೇತು- ಬುಧ- ಸೂರ್ಯರ ಮಿಲನವಾಗಿದೆ. ಇದು ಆ ವ್ಯಕ್ತಿಯಲ್ಲಿ ಪ್ರಬಲತೆಯನ್ನೂ ತೀಕ್ಷ್ಣ ಬುದ್ಧಿಯನ್ನೂ ನೀಡುತ್ತದೆ.

ಅತ್ಯಂತ ಶ್ರೇಷ್ಠವಾದ ಸಂತಾನ ಸುಖದ ಭಾಗ್ಯವೂ ಸೋನಿಯಾ ಗಾಂಧಿಗಿದೆ. ಗುಪ್ತ ಸಂಪತ್ತು, ಧನಕನಕಗಳ ಆಗಮನದ ಸಂಭವವೂ ಇವರಿಗೆ ಹೆಚ್ಚು. ಕುಂಡಲಿಯ 12ನೇ ಮನೆಯಲ್ಲಿ ಚಂದ್ರ ಶಾರೀರಿಕವಾಗಿ ದುರ್ಬಲನೂ, ಜನ್ಮ ಸ್ಥಾನದಿಂದ ಬಹುದೂರದಲ್ಲೂ ಇರುವುದರಿಂದ ಇವರಲ್ಲಿ ದಾನ- ಧರ್ಮದ ಅಭಿರುಚಿ ಹೆಚ್ಚಿಸಲು ಪ್ರೇರೇಪಿಸುತ್ತಾನೆ.

ಸೋನಿಯಾರಿಗೆ 2012ರವರೆಗೆ ಬುಧನ ಮಹಾದೆಶೆಯಲ್ಲಿ ರಾಹುವಿನ ಪ್ರತ್ಯಂತರ ದೆಶೆಯಿದೆ. ಗೋಚರದಲ್ಲಿ ನೀಚ ಮಂಗಳ, ಪರಾಕ್ರಮ ಭಾವದಲ್ಲಿ ಶನಿ, ನೀಚ ಗುರು ಇದ್ದಾರೆ. ಹಾಗಾಗಿ ಡಿಸೆಂಬರ್‌ನಿಂದ ಮಾರ್ಚ್‌ವರೆಗಿನ ಸಮಯ ಉತ್ತಮ ಕಾರ್ಯಗಳಿಗೆ ಅಷ್ಟು ಒಳ್ಳೆಯ ಸಮಯವಲ್ಲ.

ಈ ಸಮಯದಲ್ಲಿ ಸೋನಿಯಾರ ವಿರೋಧಿಗಳು ಸಕ್ರಿಯರಾಗಿರುತ್ತಾರೆ. ಹಾಗಾಗಿ ದುರ್ಘಟನೆಗಲಿಗೆ ಎಡೆಯಾಗದಂತೆ ಜಾಗರೂಕರಾಗಿರುವುದು ಒಳ್ಲೆಯದು. ಚಿಂತೆ ಹೆಚ್ಚುತ್ತದೆ. ಎಪ್ರಿಲ್‌ನಿಂದ ಸ್ಥಿತಿ ಕೊಂಚ ಸುಧಾರಿಸುತ್ತದೆ. ಮೇನಿಂದ ಅಕ್ಟೋಬರ್‌ವರೆಗಿನ ಸಮಯ ಸರ್ವಶ್ರೇಷ್ಠವಾಗಿರುತ್ತದೆ. ಎಲ್ಲಾ ವಲಯದಲ್ಲೂ ಸುಧಾರಣೆಯಾಗುತ್ತದೆ. ಹೊಸ ಸುಧಾರಣೆ, ಹೊಸ ಯೋಚನೆ, ಹೊಸ ಚಿಂತನೆಯೊಂದಿಗೆ ನವೋಲ್ಲಾಸ ಮೂಡುತ್ತದೆ. 2010ರ ನವೆಂಬರ್ ಹಾಗೂ ಡಿಸೆಂಬರ್ ತಿಂಗಳು ಸಾಮಾನ್ಯವಾಗಿರುತ್ತದೆ.

ಹಾಗಾಗಿ ಶನಿಯ ಆರಾಧನೆ ಸೋನಿಯಾರಿಗೆ ಬಹುಮುಖ್ಯ. ಕುಂಡಲಿಯ ಅನುಸಾರವಾಗಿ ಆರು ತಿಂಗಳು ನೀಚ ಮಂಗಳನಿದ್ದಾನೆ. ಇದು ತುಂಬ ಕಷ್ಟಗಳ ಸಂಕೇತ. ಹಾಗಾಗಿ ಮಂಗಳನ ಆರಾಧನೆಯೂ ಉತ್ತಮ.

ವೆಬ್ದುನಿಯಾವನ್ನು ಓದಿ