ಜೆನಿಲಿಯಾಗೆ 2012ರಲ್ಲಿ ವಿವಾಹಯೋಗವಂತೆ!

ಭಾರತಿ ಪಂಡಿತ್

<img data-cke-saved-src="/kn/articles/0909/07/images/img1090907091_1_1.jpg" src="/kn/articles/0909/07/images/img1090907091_1_1.jpg" alt="Genelia D" souza'="" hspace="4" vspace="4" border="0" class="wdp_img">
 
IFM
{C} ದಕ್ಷಿಣ ಭಾರತದ ಪ್ರಸಿದ್ಧ ನಟಿ, ಮುದ್ದುಮುಖದ ಚೆಲುವೆ ಜೆನಿಲಿಯಾ ಡಿಸೋಜಾ ಇಮ್ರಾನ್ ಖಾನ್ ಜತೆ ಜಾನೇ ತೂ... ಸಿನಿಮಾದಲ್ಲಿ ಕಾಣಿಸಿಕೊಂಡದ್ದೇ ತಡ ಬಾಲಿವುಡ್ಡಿನಲ್ಲಿ ಆಕೆಯೀಗ ಅತಿ ಬೇಡಿಕೆಯ ನಟಿಯಾಗಿ ಭಡ್ತಿ ಪಡೆದಿದ್ದಾಳೆ. 1987ರ ಆಗಸ್ಟ್ ಐದರಂದು ಜನಿಸಿದ ಜೆನಿಲಿಯಾಳದ್ದು ಕುಂಡಲಿಯ ಅನುಸಾರ ಕರ್ಕ ಲಗ್ನ ಹಾಗೂ ಮಕರ ರಾಶಿ.

ಕರ್ಕ ಲಗ್ನದಲ್ಲಿ ಜನಿಸಿದವರು ಭಾವುಕರಾಗಿರುತ್ತಾರೆ, ಸ್ನೇಹಪರತೆ, ಕಲೆಯ ಮೇಲೆ ಪ್ರೀತಿ ಇವರ ಇನ್ನಿತರ ಪ್ರಮುಖ ಗುಣನಡತೆಗಳು. ಲಗ್ನದಲ್ಲಿ ಚಂದ್ರನಿರಿಸಿದ ದೃಷ್ಟಿ ಬಲ ಇದ್ದೇ ಇದೆ. 12ನೇ ಸ್ಥಾನದ ಶುಕ್ರ ಸುಖ ಸಂಪನ್ನತೆಯಿಂದ ತುಂಬಿದ ಜೀವನ ನೀಡುತ್ತಾನೆ.

ತೃತೀಯ ಸ್ಥಾನದ ಶನಿ ಪರಾಕ್ರಮ ಹೆಚ್ಚಿಸುತ್ತಾನೆ. ಚತುರ್ಥ ಮಂಗಳ- ಗುರು ಈಕೆಗೆ ಆಸ್ತಿಪಾಸ್ತಿ ಲಾಭ ತರುತ್ತವೆ. ಅಮ್ಮ ಅಪ್ಪನ ಸಹಕಾರವೂ ಇವರ ಕುಂಡಲಿಯಲ್ಲಿ ಎದ್ದು ಕಾಣುತ್ತದೆ. ವ್ಯವಸಾಯದಲ್ಲಿ ಇವರಿಗೆ ಉನ್ನತಿಯಿದೆ. ಸಪ್ತಮ ಚಂದ್ರ ಯಶಸ್ವೀ ಹಾಗೂ ಸ್ನೇಹಿತನಂತಹ ಉತ್ತಮ ಸಂಗಾತಿಯನ್ನೂ ಕರುಣಿಸುತ್ತಾನೆ.

ಸದ್ಯ ಜೆನಿಲಿಯಾಗೆ ಗುರು ಮಹಾದೆಶೆಯಿದೆ. ಗುರು ಭಾಗ್ಯೇಶನಾಗಿ ಚತುರ್ಥ ಸ್ಥಾನದಲ್ಲಿದ್ದಾನೆ. ದಶಮನ ಕಡೆಗೆ ದೃಷ್ಟಿ ಹಾಯಿಸುತ್ತಿದ್ದಾನೆ. ಮುಂದಿನ ದಿನಗಳು ಜೆನಿಲಿಯಾ ಪಾಲಿಗೆ ನಿರ್ಣಾಯಕ ದಿನಗಳು. ಉತ್ತಮ ಚಿತ್ರಗಳು ಈಕೆಯ ಪಾಲಿಗೆ ಒದಗಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಈಕೆಗೆ ಅಬಿಮಾನಿಗಳ ಸಂಖ್ಯೆ ದೊಡ್ಡದಾಗುತ್ತದೆ. ಜನಪ್ರಿಯತೆಯೂ ಹೆಚ್ಚುತ್ತದೆ. ಆದರೆ ನಿರ್ಣಯ ತೆಗೆದುಕೊಳ್ಳುವ ಸಂದರ್ಭ ಗುರುಹಿರಿಯರ ಮಾತು ಕೇಳಿದರೆ ಉತ್ತಮ. ವಿವಾದಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಸಂಭವವೂ ಇದೆ. ಇದರಿಂದ ಬಚಾವಾಗಲು ಯುಕ್ತಿ ಉಪಯೋಗಿಸಬೇಕು.

2010ರಲ್ಲಿ ನಿಶ್ಚಿತಾರ್ಥವೋ, ಅಥವಾ ಸಂಗಾತಿಯ ಆಯ್ಕೆಯೋ ನಡೆಯಬಹುದು. 2012ಕ್ಕೆ ಇದು ವಿವಾಹಕ್ಕೆ ಪ್ರೇರಣೆಯಾಗಲಿದೆ. ಒಟ್ಟಾರೆ ಮುಂದಿನ ವರ್ಷಗಳು ಜೆನಿಲಿಯಾ ಪಾಲಿಗೆ ಭಾಗ್ಯೋದಯವನ್ನೇ ಕರುಣಿಸಲಿವೆ.

ವೆಬ್ದುನಿಯಾವನ್ನು ಓದಿ